ಬಾನಂಗಳದಲ್ಲಿ ಸೂರ್ಯಗ್ರಹಣ ಸ್ಪರ್ಶಕಾಲ ಆರಂಭವಾಗಿ ಅಬುದಾಭಿಯಲ್ಲಿ ಗ್ರಹಣದ ದೃಶ್ಯ ಸ್ಪಷ್ಟವಾಗಿ ಗೋಚರಿಸಿದೆ.
ಅದೇ ರೀತಿ ವಿವಿಧ ಕಡೆಗಳಲ್ಲಿ ಗ್ರಹಣ ಕಾಲದಲ್ಲಿ ಬದಲಾವಣೆ ಕಂಡು ಬಂದಿದ್ದು, ಅನೇಕ ಪ್ರದೇಶಗಳಲ್ಲಿ ಗ್ರಹಣದ ದೃಶ್ಯಗಳನ್ನು ಖಗೋಳ ವೀಕ್ಷಕರು ಕಣ್ತುಂಬಿಕೊಂಡಿದ್ದಾರೆ.
ರಾಜ್ಯದಲ್ಲಿ ರಾಹುಗ್ರಸ್ತ ಸೂರ್ಯಗ್ರಹಣ ಆರಂಭವಾಗಿದ್ದರೂ ನೆರಳು – ಬೆಳಕಿನ ಆಟ ಕಣ್ತುಂಬಿಕೊಳ್ಳಲು ಸಾಧ್ಯವಾಗುತ್ತಿಲ್ಲ. ರಾಜ್ಯದ ಹಲವೆಡೆ ಮೋಡ ಮುಸುಕಿದ ವಾತಾವರಣ ಕಂಡು ಬಂದ ಹಿನ್ನೆಲೆಯಲ್ಲಿ ಸೂರ್ಯಗ್ರಹಣ ವೀಕ್ಷಣೆ ಸಾಧ್ಯವಾಗದೆ ಅನೇಕರಿಗೆ ನಿರಾಸೆಯಾಗಿದೆ. ಮತ್ತೆ ಕೆಲವೆಡೆ ಗ್ರಹಣದ ದೃಶ್ಯ ಸ್ಪಷ್ಟವಾಗಿ ಗೋಚರಿಸಿದೆ ಎಂದು ಹೇಳಲಾಗಿದೆ.