ಇಂದು ಬೆಳಿಗ್ಗೆ ಕರ್ನಾಟಕದ ಹಂಪಿ ಹಾಗೂ ಜಾರ್ಖಂಡ್ ನ ಜಮ್ಶೆಡ್ ಪುರದಲ್ಲಿ ಲಘು ಭೂಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ಶಾಸ್ತ್ರ ಕೇಂದ್ರ ತಿಳಿಸಿದೆ.
ಮುಂಜಾನೆ 6-55 ರ ಸುಮಾರಿಗೆ ಹಂಪಿಯಲ್ಲಿ ಸಂಭವಿಸಿರುವ ಲಘು ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.0 ದಾಖಲಾಗಿದ್ದರೆ ಜಮ್ಶೆಡ್ಪುರದಲ್ಲಿ ಸಂಭವಿಸಿರುವ ಲಘು ಭೂಕಂಪದ ತೀವ್ರತೆ 4.7 ದಾಖಲಾಗಿದೆ ಎಂದು ತಿಳಿಸಲಾಗಿದೆ.
ಲಘು ಭೂಕಂಪನದಿಂದ ಯಾವುದೇ ಹಾನಿ ಸಂಭವಿಸಿಲ್ಲ. ಅಲ್ಲದೇ ತೀವ್ರತೆ ಕಡಿಮೆ ಇದ್ದ ಕಾರಣ ಸಾರ್ವಜನಿಕರ ಅರಿವಿಗೂ ಬಂದಿಲ್ಲವೆಂದು ಹೇಳಲಾಗಿದೆ.