ಬೆಂಗಳೂರು: ಡ್ರೋನ್ ಪ್ರತಾಪ್ ವಿರುದ್ಧ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ.
ಸಾಮಾಜಿಕ ಕಾರ್ಯಕರ್ತ ಜೇಕಬ್ ಜಾರ್ಜ್ ಎಂಬುವರು ದೂರು ನೀಡಿದ್ದು ಡ್ರೋನ್ ತಯಾರಿಕೆಯಲ್ಲಿ ಸಾಧನೆ ಮಾಡಿರುವುದಾಗಿ ಪ್ರತಾಪ್ ವಂಚಿಸಿದ ಆರೋಪ ಕೇಳಿಬಂದಿದೆ. ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಕೋರಿದ್ದಾರೆ.
ಡ್ರೋನ್ ಪ್ರತಾಪ್ ಸಾರ್ವಜನಿಕರನ್ನು ವಂಚಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಹಣ ಪಡೆದಿದ್ದಾರೆ. ದಾನಿಗಳ ನೆರವು ಪಡೆದಿದ್ದಾರೆ. ಮಂಡ್ಯ ಮೂಲದ ಅವರು 80 ದೇಶಗಳಲ್ಲಿ ಸುತ್ತಾಡಿದ್ದು 300 ಉಪನ್ಯಾಸ ನೀಡಿದ್ದಾರೆ. ವಿದೇಶಗಳ ಡ್ರೋನ್ ಪ್ರದರ್ಶನದಲ್ಲಿ ಚಿನ್ನದ ಪದಕ ಪಡೆದಿದ್ದೇನೆ ಎಂದು ಹೇಳಿಕೊಂಡಿರುವ ಅವರ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದ್ದು, ಕ್ರಮಕೈಗೊಳ್ಳುವಂತೆ ದೂರು ನೀಡಲಾಗಿದೆ ಎನ್ನಲಾಗಿದೆ.