ನಾವು ವೀಕ್ ಇದ್ರೆ ವೈರಸ್ ಸ್ಟ್ರಾಂಗ್ ಆಗುತ್ತೆ, ನಾವು ಸ್ಟ್ರಾಂಗ್ ಆಗಿದ್ರೆ ವೈರಸ್ ವೀಕ್ ಆಗುತ್ತೆ ಎಂದು ಡಾ. ರಾಜು ಹೇಳಿದ್ದಾರೆ.
ಕೊರೋನಾ ಬಗ್ಗೆ ನಿರ್ಲಕ್ಷ್ಯ ಬೇಡ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕೊರೋನಾ ಸಾಮಾನ್ಯ ವೈರಸ್ ಆಗಿದ್ದು, ಎಚ್ಚರಿಕೆ ವಹಿಸುವುದು ಒಳ್ಳೆಯದು ಎಂದು ವಿಡಿಯೋದಲ್ಲಿ ಮಾಹಿತಿ ನೀಡಿ, ಕೊರೋನಾ ಕುರಿತಾದ ಸಂದೇಹ, ಪ್ರಶ್ನೆ, ಗೊಂದಲಗಳಿಗೆ ಅವರು ಉತ್ತರ ನೀಡಿದ್ದಾರೆ.
ಯಾವುದೇ ವೈರಸ್ ಆದ್ರೂ ಅಷ್ಟೇ ನಾವು ಸ್ಟ್ರಾಂಗ್ ಆಗಿದ್ರೆ ವೈರಸ್ ವೀಕ್ ಆಗುತ್ತೆ. ಕೊರೋನಾ ವೈರಸ್ ಅಲ್ಲ, ಯಾವುದೇ ವೈರಸ್ ಗಾಳಿಯಲ್ಲಿ ಹರಡುತ್ತದೆ. ಕೊರೋನಾ ಲಕ್ಷಣ ಇಲ್ಲದೆಯೂ ಪಾಸಿಟಿವ್ ಬರುತ್ತದೆ ಎಂದು ತಿಳಿಸಿದ್ದು, ಕೊರೋನಾ ಕುರಿತಂತೆ ಇರುವ ಗೊಂದಲಗಳಿಗೆ ಪರಿಹಾರ ಸೂಚಿಸಿದ್ದಾರೆ.
ಕೊರೋನಾ ಈಗ ಸಮುದಾಯಕ್ಕೆ ಹರಡಿದ್ದು, ಮನೆಯಲ್ಲಿ ಯಾರಿಗಾದರೂ ಬಂದರೆ ಆತಂಕ ಬೇಡ, ಎಚ್ಚರಿಕೆ ವಹಿಸಬೇಕು. ವೈರಸ್ ಕೊಲ್ಲಲು ಯಾವುದೇ ಮೆಡಿಸಿನ್ ಇಲ್ಲ. ನಮ್ಮಲ್ಲಿರುವ ಆಂಟಿಬಾಡಿಸ್ ಗಳು ವೈರಸ್ ಕೊಲ್ಲಬಹುದು. ವ್ಯಾಕ್ಸಿನ್ ಇದಕ್ಕೆ ಇಲ್ಲ. ವ್ಯಾಕ್ಸಿನ್ ದುಡ್ಡು ಮಾಡುವ ಉದ್ದೇಶವಿರಬಹುದು ಎಂದು ಹೇಳಿದ್ದಾರೆ.
https://www.facebook.com/106521611130177/posts/159222549193416/?sfnsn=wiwspwa