alex Certify ಜನಾಕ್ರೋಶಕ್ಕೆ ಮಣಿದ ಆರೋಗ್ಯ ಇಲಾಖೆ: ಡಾ. ರಾಜು ಕೃಷ್ಣಮೂರ್ತಿಯವರ ಕ್ಲಿನಿಕ್​ ಪುನಾರಂಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನಾಕ್ರೋಶಕ್ಕೆ ಮಣಿದ ಆರೋಗ್ಯ ಇಲಾಖೆ: ಡಾ. ರಾಜು ಕೃಷ್ಣಮೂರ್ತಿಯವರ ಕ್ಲಿನಿಕ್​ ಪುನಾರಂಭ

ಮಾಸ್ಕ್​ ಇಲ್ಲದೇ ಕೊರೊನಾ ಟ್ರೀಟ್​ಮೆಂಟ್​ ಕೊಡುತ್ತಾರೆಂಬ ಕಾರಣಕ್ಕೆ  ಬಂದ್‌ ಆಗಿದ್ದ ಡಾ. ರಾಜು ಕೃಷ್ಣಮೂರ್ತಿಯವರ ಕ್ಲಿನಿಕ್​ ಇಂದಿನಿಂದ ಸಾರ್ವಜನಿಕ ಸೇವೆಗೆ ಮುಕ್ತವಾಗಿದೆ.

ಡಾ. ರಾಜು ಕೃಷ್ಣಮೂರ್ತಿ ಬೆಂಗಳೂರಿನ ಮೂಡಲಪಾಳ್ಯದಲ್ಲಿ ನಡೆಸುತ್ತಿದ್ದ ಸಾಗರ್​ ಕ್ಲಿನಿಕ್​ನಲ್ಲಿ ಮಾಸ್ಕ್​ ಹಾಕಿಕೊಳ್ಳದೇ ಇರೋದು, ಸಾಮಾಜಿಕ ಅಂತರ ಪಾಲನೆ ಮಾಡದಿರೋದು ಸೇರಿದಂತೆ ಸಾಕಷ್ಟು ಆರೋಪಗಳು ಕೇಳಿ ಬಂದಿದ್ದರಿಂದ ಜಿಲ್ಲಾ ಆರೋಗ್ಯ ಅಧಿಕಾರಿಗಳು ನೋಟಿಸ್​ ನೀಡಿದ್ದರು. ಇದಾದ ಬಳಿಕ ಸಾಗರ್​ ಕ್ಲಿನಿಕ್​ ಬಂದ್​ ಆಗಿತ್ತು.

ಡಾ. ರಾಜು ಕೃಷ್ಣಮೂರ್ತಿ ಟಿವಿ ಸಂದರ್ಶನವೊಂದರಲ್ಲಿ ಹೇಳಿಕೆಯೊಂದನ್ನ ನೀಡುವ ಮೂಲಕ ವಿವಾದಕ್ಕೆ ಗುರಿಯಾಗಿದ್ದರು. ಕೊರೊನಾ ಸೋಂಕಿತರಿಗೆ ಮಾಸ್ಕ್​, ಸ್ಯಾನಿಟೈಸರ್​ ಬೇಡ ಎಂದು ಹೇಳಿದ್ದು ಮಾತ್ರವಲ್ಲದೇ ತಾನು ಮಾಸ್ಕ್​ ಧರಿಸದೇ ಟ್ರೀಟ್​ಮೆಂಟ್​ ನೀಡ್ತೇನೆ ಎಂತಲೂ ಹೇಳಿಕೊಂಡಿದ್ದರು.

ಈ ಸಂದರ್ಶನದ ಕ್ಲಿಪ್​ ವೈರಲ್​ ಆಗುತ್ತಿದ್ದಂತೆಯೇ ಕರ್ನಾಟಕ ಮೆಡಿಕಲ್​ ಕೌನ್ಸಿಲ್​ ಇವರನ್ನ ವೈದ್ಯ ವೃತ್ತಿಯಿಂದ ನಿಷೇಧ ಮಾಡಬೇಕು ಎಂದು ಶಿಫಾರಸು ಮಾಡಿತ್ತು. ಅಲ್ಲದೇ ಆರೋಗ್ಯ ಅಧಿಕಾರಿಗಳು ನೋಟಿಸ್​ ನೀಡಿದ ಬಳಿಕ ಮಂಗಳವಾರ ಇವರ ಕ್ಲಿನಿಕ್​ನ್ನು ಬಂದ್​ ಮಾಡಲಾಗಿತ್ತು. ಆದರೆ ಇದರಿಂದ ರೋಗಿಗಳಿಗೆ ಸಮಸ್ಯೆ ಆಗ್ತಿರೋದ್ರ ಹಿನ್ನೆಲೆ ಸ್ಥಳೀಯ ಮಾಜಿ ಕಾರ್ಪೊರೇಟರ್​ ದಾಸೇಗೌಡ ನೇತೃತ್ವದಲ್ಲಿ ಕ್ಲಿನಿಕ್​ ಪುನಾರಂಭ ಮಾಡಲಾಗಿದೆ. ಅಲ್ಲದೇ ರಾಜು ಅವರ ವಿಡಿಯೋಗಳಿಂದ ಮಾನಸಿಕ ನೆಮ್ಮದಿ ಕಂಡುಕೊಂಡಿದ್ದ ಸಾರ್ವಜನಿಕರೂ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಡಾ. ರಾಜು ಅವರಿಗೆ ದೊಡ್ಡ ಮಟ್ಟದ ಬೆಂಬಲ ನೀಡಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...