ಬೆಂಗಳೂರು: ಪ್ಲಾಸ್ಮಾ ದಾನ ಮಾಡಿದರೆ 5 ಸಾವಿರ ರೂ. ಆರೈಕೆ ವೆಚ್ಚ ನೀಡಲು ಸರ್ಕಾರ ಮುಂದಾಗಿದೆ. ಗುಣಮಟ್ಟದ ಆಹಾರ ವೆಚ್ಚಕ್ಕಾಗಿ 5000 ರೂ. ಆಹಾರ ಆರೈಕೆ ಭತ್ಯೆ ನೀಡಲಾಗುವುದು. ಕೋವಿಡ್ ಮಾನವ ಶಕ್ತಿ ಮತ್ತು ತರಬೇತಿ ಟಾಸ್ಕ್ ಫೋರ್ಸ್ ಈ ಕುರಿತಾಗಿ ಶಿಫಾರಸು ಮಾಡಿತ್ತು.
ಪ್ಲಾಸ್ಮಾ ದಾನಿಗಳಿಗೆ ಆರೈಕೆ ಭತ್ಯೆ ನೀಡುವಂತೆ ಶಿಫಾರಸು ಮಾಡಿದ್ದನ್ನು ಪರಿಗಣಿಸಿದ ಸರ್ಕಾರ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಪ್ಲಾಸ್ಮಾ ದಾನ ಮಾಡುವ ದಾನಿಗಳಿಗೆ 5000 ರೂ. ಆರೈಕೆ ಭತ್ಯೆ ನೀಡಲಿದೆ.
ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಪ್ಲಾಸ್ಮಾ ಬಳಕೆ ಮಾಡಲಾಗುವುದು. ಗುಣಮುಖರಾದ 14 ರಿಂದ 28 ದಿನಗಳ ಒಳಗೆ ಪ್ಲಾಸ್ಮಾ ದಾನ ಮಾಡಬಹುದಾಗಿದೆ ಎಂದು ಹೇಳಲಾಗಿದೆ.