ಕೊರೊನಾ ಸಾಂಕ್ರಾಮಿಕ ಹರಡುತ್ತಿರುವ ಸಂದರ್ಭದಲ್ಲಿ ಒತ್ತಡದಲ್ಲಿ ಕೆಲಸ ಮಾಡುತ್ತಿರುವ ವೈದ್ಯರು ಮತ್ತು ಸಿಬ್ಬಂದಿ ಒತ್ತಡ ನಿವಾರಿಸಿಕೊಳ್ಳಲು ಅಥವಾ ರೋಗಿಗಳಲ್ಲಿ ಉತ್ಸಾಹ ತುಂಬಲು ಕಸರತ್ತು ನಡೆಸುತ್ತಿದ್ದಾರೆ.
ಪ್ರಮುಖವಾಗಿ ಅನೇಕ ಕಡೆ ವೈದ್ಯರು ಸಾಮೂಹಿಕ ಡ್ಯಾನ್ಸ್ ಮಾಡಿದ್ದು, ಅದರ ವಿಡಿಯೋ ತುಣುಕುಗಳು ಆಗಿಂದಾಗ್ಗೆ ವೈರಲ್ ಆಗಿದೆ. ಬುಧವಾರ ವೈದ್ಯರ ದಿನಾಚರಣೆ ಸಂದರ್ಭದಲ್ಲಿ ಟಾಪ್ ಡಾಕ್ಟರ್ ಡ್ಯಾನ್ಸ್ ಯಾವುದೆಂದು ಇಲ್ಲಿ ಪಟ್ಟಿ ಮಾಡಲಾಗಿದೆ.
ಭಾರತದಾದ್ಯಂತ ವಿವಿಧ ಭಾಗದಲ್ಲಿ 60 ವೈದ್ಯರು ನೃತ್ಯ ಮಾಡಿದ ಮಿಕ್ಸಿಂಗ್ ವಿಡಿಯೋ ಗಮನ ಸೆಳೆದಿದೆ. ದಿ ಮಿನಿಸ್ಟ್ರಿಆಫ್ ಮೆಮೊರೀಸ್ ಟ್ವೀಟರ್ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಆಗಿದೆ. ವೈದ್ಯರ ಸ್ಟೆಪ್ಪು ಮತ್ತು ಕಸರತ್ತುಗಳು ಗಮನ ಸೆಳೆಯುತ್ತಿವೆ. ಬೆಂಗಳೂರು, ಚೆನ್ನೈ, ಪುಣೆ, ಮುಂಬೈ, ಕನ್ಯಾಕುಮಾರಿ, ಸೂರತ್, ಇಂದೋರ್, ಆಗ್ರಾ, ಪ್ರಯಾಗ್ ರಾಜ್ ಸೇರಿ ಇತರ ಕಡೆ ವೈದ್ಯರು ನೃತ್ಯ ಮಾಡಿದ್ದರು.
ರೊನಾಲ್ಡ್ ರೇಗನ್ ಯುಸಿಎಲ್ ವೈದ್ಯಕೀಯ ಕೇಂದ್ರದ ತೀವ್ರ ನಿಗಾ ಘಟಕದಲ್ಲಿ ಇಬ್ಬರು ರೋಗಿಗಳ ಆರೋಗ್ಯ ಸ್ಥಿರವಾಗಿ ವೆಂಟಿಲೇಟರ್ ಸಹಾಯ ಇಲ್ಲದೇ ಉಸಿರಾಡಲು ಆರಂಭವಾದ ನಂತರ ಅಲ್ಲಿನ ವೈದ್ಯರು, ಸಿಬ್ಬಂದಿ ಕುಣಿದು ಕುಪ್ಪಳಿಸಿದ್ದು ಸಹ ವೈರಲ್ ಆಗಿತ್ತು.
ತಮಿಳುನಾಡಿನ ವೈದ್ಯರು ಚಲನಚಿತ್ರ ಗೀತೆಗಳ ರಿಮಿಕ್ಸ್ ಗೆ ಭರ್ಜರಿಯಾಗಿ ಹೆಜ್ಜೆ ಹಾಕಿದ್ದಾರೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯರು ಹಿಂದಿ ಹಾಡೊಂದಕ್ಕೆ ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ.
https://www.instagram.com/tv/B_ZEvwApVEm/?utm_source=ig_embed