ಬೆಂಗಳೂರು: ಸದಾಶಿವ ನಗರದ ನಿವಾಸದಲ್ಲಿ ಸಿಬಿಐ ವಿಚಾರಣೆ ಮುಗಿದ ನಂತರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನೆಯಿಂದ ಹೊರಗೆ ಬಂದಿದ್ದು ಕಾರ್ಯಕರ್ತರು ಸಂಭ್ರಮಿಸಿದ್ದಾರೆ.
ಡಿಕೆಶಿ ನಿವಾಸದ ಎದುರು ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಕಾರ್ಯಕರ್ತರು ಡಿಕೆಶಿಯನ್ನು ಕಾಣುತ್ತಲೇ ಹರ್ಷೋದ್ಗಾರ ವ್ಯಕ್ತಪಡಿಸಿದ್ದಾರೆ. ಬೆಳಗ್ಗೆಯಿಂದ ಡಿ.ಕೆ. ಶಿವಕುಮಾರ್ ನಿವಾಸದ ಮೇಲೆ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಸಂಜೆ ವೇಳೆಗೆ ಪರಿಶೀಲನೆ ಮುಕ್ತಾಯವಾಗಿದ್ದು ಮನೆಯಿಂದ ಹೊರಬಂದ ಡಿಕೆಶಿಯನ್ನು ಕಂಡ ಅಭಿಮಾನಿಗಳು ಅವರ ಪರ ಘೋಷಣೆ ಕೂಗಿ ಸಂಭ್ರಮಿಸಿದ್ದಾರೆ.