
ಬೆಂಗಳೂರು: ನಿಮ್ಮ ಪ್ರೀತಿ, ವಿಶ್ವಾಸಕ್ಕೆ ಚಿರ ಋಣಿಯಾಗಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸಿಬಿಐ ದಾಳಿ ಮುಗಿದ ನಂತರ ಮನೆಯಿಂದ ಹೊರ ಬಂದ ಅವರು ಮಾತನಾಡಿ, ಹಿಂದೆ ಐಟಿ, ಇಡಿ ದಾಳಿ ನಡೆದಿತ್ತು. ಈಗ ಸಿಬಿಐ ದಾಳಿ ನಡೆದಿದೆ. ನಾನು ಪಕ್ಷಕ್ಕೆ ಕಾರ್ಯಕರ್ತರಿಗೆ ಕಳಂಕ ತರಲ್ಲ ಎಂದು ಹೇಳಿದ್ದಾರೆ.
ರಾಜಕೀಯ ಕುತಂತ್ರಕ್ಕೆ ಹೆದರುವ ಮಗ ನಾನಲ್ಲ, ಉಪ ಚುನಾವಣೆ ಹೊತ್ತಲ್ಲೇ ದಾಳಿ ನಡೆಸಲಾಗಿದೆ. ನಿಮ್ಮೆಲ್ಲರ ಬೆಂಬಲದಿಂದ ಸಮರ್ಥವಾಗಿ ಮುನ್ನಡೆಯುತ್ತೇವೆ. ನನ್ನ ಬಾಯಿ ಮುಚ್ಚಿಸಲು ಮುಂದಾದವರಿಗೆ ತೊಂದರೆ ಕೊಡುವವರಿಗೆ ದೇವರು ಒಳ್ಳೆಯದು ಮಾಡಲಿ. ಉಪ ಚುನಾವಣೆಯಲ್ಲಿ ನೀವೇ ಉತ್ತರ ಕೊಡಬೇಕೆಂದು ಹೇಳಿದ್ದಾರೆ.