ಡ್ರಗ್ಸ್ ವಿಚಾರದಲ್ಲಿ ನಟಿಮಣಿಯರು ಹಾಗೂ ಒಂದಿಷ್ಟು ಜನ ಪೆಡ್ಲರ್ಗಳು ಸುದ್ದಿಯಲ್ಲಿದ್ದರೆ, ಇವರ ಜೊತೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಕೂಡ ಸುದ್ದಿಯಲ್ಲಿದ್ದಾರೆ. ಡ್ರಗ್ಸ್ ಪಡೆಯುತ್ತಾರೆಂಬ ಆರೋಪದ ಮೇಲೆ ವಿಚಾರಣೆಗೊಳಪಡುವ ಸ್ಟಾರ್ಸ್ ಗಳ ವಿರುದ್ಧ ಫೇಸ್ ಬುಕ್, ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡುವ ಮೂಲಕ ಸದಾ ಆಕ್ಟೀವ್ ಆಗಿರುವ ಇವರು ಇದೀಗ ರಾಜಕೀಯದವರ ಸುದ್ದಿಗೂ ಎಂಟ್ರಿ ಕೊಟ್ಟಿದ್ದಾರೆ.
ಹೌದು, ಆರ್. ಆರ್. ನಗರ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಮೂರು ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಹೆಚ್ಚಾಗಿವೆ. ಈ ಮಧ್ಯೆ ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಡಿ.ಕೆ. ರವಿ ಅವರ ಪತ್ನಿ ಕುಸುಮಾ. ಕಾಂಗ್ರೆಸ್ ಸೇರ್ಪಡೆಗೊಂಡ ಕುಸುಮಾ ಅವರ ಬಗ್ಗೆ ಇದೀಗ ಪ್ರಶಾಂತ್ ಸಂಬರಗಿ ಪೋಸ್ಟ್ ಹಾಕುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.
ಕುಸುಮಾ ಅವರ ಬ್ಯಾಡ್ ಲಕ್ ಈಗ ಡಿ.ಕೆ. ಶಿವಕುಮಾರ್ಗೆ ವರ್ಗಾವಣೆ ಆಗಿದೆ. ಡಿ.ಕೆ.ರವಿ ಟು ಡಿ.ಕೆ.ಶಿವಕುಮಾರ್. ಕುಸುಮಾ ಜಿಂದಾಬಾದ್ ಎಂದು ಲೇವಡಿ ಮಾಡಿದ್ದರು. ಇದಕ್ಕೆ ನಯವಾಗಿ ಟೀಕಾ ಪ್ರಹಾರ ಮಾಡಿರುವ ಕುಸುಮಾ, ಸಹೋದರ ಪ್ರಶಾಂತ್ ಸಂಬರಗಿಯವರೇ, ನೀವು ಯಾರು ಅನ್ನೋದು ನನಗೆ ಗೊತ್ತಿಲ್ಲ. ಡ್ರಗ್ಸ್ ವಿಚಾರದಲ್ಲಿ ನಿಮ್ಮ ಹೋರಾಟ ಒಳ್ಳೆಯ ಕಾರ್ಯ. ಆದರೆ ಇದೀಗ ನನ್ನ ಅದೃಷ್ಟದ ಬಗ್ಗೆ ಮಾತನಾಡುತ್ತಿದ್ದೀರಾ. ಯಾರನ್ನೋ ಮೆಚ್ಚಿಸುವ ಭರದಲ್ಲಿ ನಿಮ್ಮ ಘನತೆ ಕಳೆದುಕೊಳ್ಳಬೇಡಿ. ಬೇರೊಬ್ಬರ ಬದುಕಿನ ಬಗ್ಗೆ ಮಾತನಾಡುವಾಗ ಎಚ್ಚರವಿರಲಿ. ನಿಮ್ಮ ಮನೆಯ ಅಕ್ಕ ತಂಗಿ ಇದ್ದರೆ ಹೀಗೆ ಮಾತನಾಡುತ್ತಿದ್ದಿರಾ..? ನೀವು ಮಾಡುವ ಪೋಸ್ಟ್ ನಿಮ್ಮ ಬುದ್ದಿಯ ಹಾಗೂ ಮನಸ್ಥಿತಿಯ ಬಗ್ಗೆ ತಿಳಿಯುತ್ತದೆ ಎಂಬರ್ಥದಲ್ಲಿ ಹೇಳಿದ್ದಾರೆ.
https://www.facebook.com/kusumaforRRnagar/photos/a.109614230913146/114011517140084/