alex Certify ಸೊಸೆ ಕುಸುಮಾ ವಿರುದ್ಧ ಡಿ.ಕೆ. ರವಿ ತಾಯಿ ಆಕ್ರೋಶ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೊಸೆ ಕುಸುಮಾ ವಿರುದ್ಧ ಡಿ.ಕೆ. ರವಿ ತಾಯಿ ಆಕ್ರೋಶ…!

ಆರ್‌ಆರ್ ನಗರ ಉಪಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈಗಾಗಲೇ ಮೂರು ಪಕ್ಷಗಳು ಕೂಡ ತಮ್ಮ ಅಭ್ಯರ್ಥಿಗಳನ್ನು ಆ ಕ್ಷೇತ್ರದಲ್ಲಿ ಹಾಕಲು ಚರ್ಚೆಗಳನ್ನು ಮಾಡುತ್ತಿದ್ದಾರೆ. ಇದರ ನಡುವೆ ಆರ್‌ಆರ್‌ ನಗರದಲ್ಲಿ ಚುನಾವಣೆಗೆ ನಿಲ್ಲಲು ದಿವಂಗತ ಡಿ.ಕೆ. ರವಿ ಪತ್ನಿ ಕುಸುಮಾ ಒಲವು ತೋರಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಇದೀಗ ಸೊಸೆಯ ಈ ನಡೆಗೆ ಡಿ.ಕೆ. ರವಿ ತಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ಮಗನ ಹೆಸರು ಬಳಸಿಕೊಂಡು ಚುನಾವಣೆ ಪ್ರಚಾರ ಅಥವಾ ಸಿಂಪತಿ ಗಿಟ್ಟಿಸಿಕೊಂಡರೆ ನಾನು ಸುಮ್ಮನಿರೋದಿಲ್ಲ. ಚುನಾವಣೆ ಸಮಯದಲ್ಲಿ ನನ್ನ ಮಗನ ಫೋಟೋ ಬಳಸಿಕೊಂಡರೆ ಪರಿಣಾಮ ಸರಿ ಇರೋದಿಲ್ಲ ಅಂತ ಸೊಸೆ ಕುಸುಮಾಗೆ ಡಿ.ಕೆ. ರವಿ ತಾಯಿ ಎಚ್ಚರಿಕೆ ನೀಡಿದ್ದಾರೆ.

ಇನ್ನು ಇದೇ ವೇಳೆ ಸೊಸೆ ವಿರುದ್ಧ ಹರಿಹಾಯ್ದಿರುವ ತಾಯಿ ಗೌರಮ್ಮ, ಅವಳು ನನ್ನ ಮಗನ ಜೊತೆಯಲ್ಲಿಯೇ ಹೋಗಿದ್ದಾಳೆ. ನನ್ನ ಮಗ ದುಡಿದ್ದಿದ್ದ ಹಣವನ್ನು ನುಂಗಿದ್ದಾಳೆ. ನಮ್ಮ ಕಷ್ಟಕ್ಕೆ ಆಕೆ ಆಗಿಲ್ಲ. ಬದುಕಿದ್ದೇವಾ ಎಂದು ಬಂದು ನೋಡಿಲ್ಲ. ಇವಾಗ ಮಗನ ಹೆಸರು ಹೇಳಿಕೊಂಡು ಚುನಾವಣೆಗೆ ನಿಲ್ಲುತ್ತಿದ್ದಾಳೆ. ನನಗೆ ಬಂದ ಕಷ್ಟ ಅವಳ ಅಪ್ಪ ಅಮ್ಮಂಗೂ ಬರುತ್ತದೆ. ಅದನ್ನು ನಾನು ನೋಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...