ಬೆಂಗಳೂರು: ರಾಜ್ಯದಲ್ಲಿ ಇವತ್ತು 7385 ಜನರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 2,56,975 ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಇಂದು 102 ಮಂದಿ ಸೋಂಕಿತರು ಮೃತಪಟ್ಟಿದ್ದು ಇದುವರೆಗೆ 4429 ಜನ ಸಾವನ್ನಪ್ಪಿದ್ದಾರೆ. ಇವತ್ತು 6231 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 1,70,381 ಜನ ಡಿಸ್ಚಾರ್ಜ್ ಆಗಿದ್ದಾರೆ. 82,149 ಸಕ್ರಿಯ ಪ್ರಕರಣಗಳಿದ್ದು, 705 ಜನ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ ಇಂದು 2912 ಹೊಸ ಪ್ರಕರಣ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 99,822 ಕ್ಕೆ ಏರಿಕೆಯಾಗಿದೆ. ಇಂದು 25 ಮಂದಿ ಮೃತಪಟ್ಟಿದ್ದು ಇದುವರೆಗೆ 1613 ಜನ ಸಾವನ್ನಪ್ಪಿದ್ದಾರೆ. 1981 ಜನ ಡಿಸ್ಚಾರ್ಜ್ ಆಗಿದ್ದು, ಇದುವರೆಗೆ 64,022 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 34,186 ಸಕ್ರಿಯ ಪ್ರಕರಣಗಳಿವೆ.
ಜಿಲ್ಲಾವಾರು ವಿವರ:
ಬಾಗಲಕೋಟೆ 159, ಬಳ್ಳಾರಿ 483, ಬೆಳಗಾವಿ 358, ಬೆಂಗಳೂರು ಗ್ರಾಮಾಂತರ 77, ಬೆಂಗಳೂರು ನಗರ 2912, ಬೀದರ್ 85, ಚಾಮರಾಜನಗರ 120, ಚಿಕ್ಕಬಳ್ಳಾಪುರ 76, ಚಿಕ್ಕಮಗಳೂರು 124 ಜನರಿಗೆ ಸೋಂಕು ತಗುಲಿರುವ ವರದಿ ಬಂದಿದೆ.
ಚಿತ್ರದುರ್ಗ 60, ದಕ್ಷಿಣಕನ್ನಡ 177, ದಾವಣಗೆರೆ 245, ಧಾರವಾಡ 159, ಗದಗ 114, ಹಾಸನ 196, ಹಾವೇರಿ 111, ಕಲಬುರ್ಗಿ 210, ಕೊಡಗು 46, ಕೋಲಾರ 69, ಕೊಪ್ಪಳ 132, ಮಂಡ್ಯ 109 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ.
ಮೈಸೂರು 253, ರಾಯಚೂರು 111, ರಾಮನಗರ 27, ಶಿವಮೊಗ್ಗ 188, ತುಮಕೂರು 138, ಉಡುಪಿ 351, ಉತ್ತರಕನ್ನಡ 115, ವಿಜಯಪುರ 112, ಯಾದಗಿರಿ 68 ಜನರಿಗೆ ಸೋಂಕು ತಗುಲಿದೆ.
ಇವತ್ತು ಬೆಂಗಳೂರು ನಗರ 25, ಬಳ್ಳಾರಿ 8, ಬೆಳಗಾವಿ 4, ದಕ್ಷಿಣಕನ್ನಡ 6, ದಾವಣಗೆರೆ 5, ಹಾಸನ 7, ಕೊಪ್ಪಳ 7 ಜನ ಸೇರಿದಂತೆ ರಾಜ್ಯದಲ್ಲಿ ಇಂದು 102 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.