ಬೆಂಗಳೂರಿನ ಡಿಜಿಟಲ್ ನ್ಯಾಷನಲ್ ಮೋಟಾರ್ ಇನ್ಶುರೆನ್ಸ್ ವಿಮಾ ಕಂಪನಿ ಸಂಪೂರ್ಣವಾಗಿ ನಕಲಿ. ಡಿಜಿಟಲ್ ನ್ಯಾಷನಲ್ ಮೋಟಾರ್ ಇನ್ಶುರೆನ್ಸ್, ಪಾಲಿಸಿಯನ್ನು ಮಾರಾಟ ಮಾಡಲು ಪರವಾನಗಿ ಹೊಂದಿಲ್ಲ ಎಂದು ಐಆರ್ಡಿಎಐ ತಿಳಿಸಿದೆ.
ಈ ಬಗ್ಗೆ ಐಆರ್ಡಿಎಐ ಸಾರ್ವಜನಿಕ ನೋಟಿಸ್ ನೀಡಿದೆ. ಇದರರ್ಥ ಕಂಪನಿಯು ಸಂಪೂರ್ಣವಾಗಿ ನಕಲಿ ಮತ್ತು ಇದುವರೆಗೆ ಗ್ರಾಹಕರಿಗೆ ಮಾರಾಟ ಮಾಡಿದ ಎಲ್ಲಾ ಪಾಲಿಸಿಗಳು ಸುಳ್ಳು ಎಂಬುದು ಸ್ಪಷ್ಟವಾಗಿದೆ.
ಡಿಜಿಟಲ್ ನ್ಯಾಷನಲ್ ಮೋಟಾರ್ ಇನ್ಶುರೆನ್ಸ್ 2008 ರಿಂದ ತನ್ನ ವೆಬ್‌ಸೈಟ್‌ನಲ್ಲಿ ವಿಮಾ ವ್ಯವಹಾರದ ಬಗ್ಗೆ ಮಾಹಿತಿ ನೀಡ್ತಿದೆ. ಕಂಪನಿಯ ವೆಬ್‌ಸೈಟ್ https://dnmins.wixsite.com/dnmins ಮತ್ತು ಇ-ಮೇಲ್ ಐಡಿ Digitalpolicyservices@gmail.com. ಆದರೆ ಕಂಪನಿಗೆ ವಿಮೆ ಪಾಲಿಸಿ ಮಾರಾಟ ಮಾಡಲು ಪರವಾನಗಿ ಇಲ್ಲ. ಕಂಪನಿಯ ವಂಚನೆಯಿಂದ ಸುರಕ್ಷಿತರಾಗಿರುವಂತೆ ಐಆರ್ಡಿಎಐ ಹೇಳಿದೆ.
ಡಿಜಿಟಲ್ ನ್ಯಾಷನಲ್ ಮೋಟಾರ್ ಇನ್ಶುರೆನ್ಸ್ ಗ್ರೇಟರ್ ಬೆಂಗಳೂರಿನ ಪ್ರಮುಖ ವಿಮಾ ಕಂಪನಿ ಎಂದು ಹೇಳಿಕೊಂಡಿದೆ. ಕಂಪನಿಯ ವೆಬ್‌ಸೈಟ್‌ನ ಮಾಹಿತಿಯ ಪ್ರಕಾರ, ಇದು ಕಾರು, ಬೈಕ್, ಆಟೋ ಮತ್ತು ಬಸ್‌ಗಳಿಗೆ ವಿಮಾ ಪಾಲಿಸಿಗಳನ್ನು ಮಾರಾಟ ಮಾಡುತ್ತದೆ.
ಡಿಜಿಟಲ್ ನ್ಯಾಷನಲ್ ಮೋಟಾರ್ ಇನ್ಶುರೆನ್ಸ್ ಗ್ರೇಟರ್ ಮಾತ್ರವಲ್ಲ ಈ ಹಿಂದೆ ಅನೇಕ ಕಂಪನಿಗಳು ಜನರಿಗೆ ಮೋಸ ಮಾಡಿವೆ. ಹಾಗಾಗಿ ಯಾವುದೇ ರೀತಿಯ ವಿಮೆಯನ್ನು ತೆಗೆದುಕೊಳ್ಳುವ ಮೊದಲು ಬಹಳ ಜಾಗರೂಕರಾಗಿರಬೇಕು. ಪಾಲಿಸಿ ಪಡೆಯುವ ಮೊದಲು ಕಂಪನಿ ವೆಬ್ಸೈಟ್ ಗೆ ತೆರಳಿ ಕಂಪನಿಯ ಪರವಾನಗಿಗೆ ಸಂಬಂಧಿಸಿದ ಮಾಹಿತಿ ಪಡೆಯಿರಿ. ಯಾವುದೇ ಪ್ರಶ್ನೆ ಇದ್ದರೂ ಐಆರ್‌ಡಿಎಐ ವೆಬ್‌ಸೈಟ್‌ನಿಂದ ಮಾಹಿತಿಯನ್ನು ಪಡೆದು ಮುಂದಿನ ಹೆಜ್ಜೆಯಿಡಿ.