
ಉಡುಪಿ ಜಿಲ್ಲೆ ಕುಂದಾಪುರ ಪಟ್ಟಣದಲ್ಲಿ ತಾಯಿ ನಿಧನರಾದ ದುಃಖ ತಡೆಯಲಾರದೆ ಪುತ್ರನೂ ಮೃತಪಟ್ಟಿದ್ದಾರೆ.
ಕುಂದಾಪುರದ 80 ವರ್ಷದ ಶಕುಂತಲಾ ಶೇಟ್ ಶುಕ್ರವಾರ ವಯೋಸಹಜ ಅನಾರೋಗ್ಯದಿಂದ ನಿಧನ ಹೊಂದಿದ್ದು ಅವರು ನಿಧನರಾದ ಒಂದು ಗಂಟೆಯ ಅವಧಿಯಲ್ಲಿ ಪುತ್ರ ಪ್ರಶಾಂತ್ ಶೇಟ್(45) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಒಂದೇ ದಿನ ಇಬ್ಬರನ್ನು ಕುಟುಂಬದವರು ಕಳೆದುಕೊಂಡಿದ್ದಾರೆ.