ಡ್ರೈನೇಜ್ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಇಬ್ಬರು ಸಾವು ಕಂಡ ಘಟನೆ ಚಂದಾಪುರ ಸಮೀಪದ ಟರ್ನಿಂಗ್ ಕಂಪನಿಯೊಂದರಲ್ಲಿ ನಡೆದಿದೆ.
ಜೇಮ್ಸ್(26), ಆನಂದ್(32) ಸಾವನ್ನಪ್ಪಿದವರು ಎಂದು ಹೇಳಲಾಗಿದೆ. ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲ್ಲೂಕು ಚಂದಾಪುರದಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.