alex Certify ಕೊರೊನಾ ಸೋಂಕಿತರಿಗೆ ಚಿಕಿತ್ಸೆ: ಸರ್ಕಾರದಿಂದ ಮತ್ತೊಂದು ಮಹತ್ವದ ಕ್ರಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸೋಂಕಿತರಿಗೆ ಚಿಕಿತ್ಸೆ: ಸರ್ಕಾರದಿಂದ ಮತ್ತೊಂದು ಮಹತ್ವದ ಕ್ರಮ

ಬೆಂಗಳೂರು: ಮಲ್ಲೇಶ್ವರದ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ 100 ಐಸಿಯು ಹಾಸಿಗೆಗಳಿಗೆ ವ್ಯವಸ್ಥೆ ಮಾಡಲಾಗುವುದು ಎಂದು ನಗರದ ಕೋವಿಡ್ ಕೇರ್ ಸೆಂಟರ್ ಉಸ್ತುವಾರಿ, ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಮಂಗಳವಾರ ಕೆಸಿ ಜನರಲ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ನಗರದ ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾದ ಈ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ 4 ಹಾಸಿಗೆಗಳಿದ್ದು ಕೂಡಲೇ ಅವುಗಳ ಸಂಖ್ಯೆಯನ್ನು 100 ಕ್ಕೆ ಹೆಚ್ಚಿಸಲಾಗುವುದು ಎಂದು ಹೇಳಿದ್ದಾರೆ.

ಆಸ್ಪತ್ರೆಯ ಒಳಗೆ 50 ಹಾಸಿಗೆಗಳು ಹಾಗೂ ಆಸ್ಪತ್ರೆಯ ಹೊರಗೆ 50 ಮಾಡ್ಯೂಲರ್ ಐಸಿಯುಗಳನ್ನು ಸ್ಥಾಪಿಸಲಾಗುವುದು. ಮಾಡ್ಯೂಲರ್ ಐಸಿಯುಗಳು ಒಂದು ರೀತಿಯಲ್ಲಿ ಮೊಬೈಲ್ ಐಸಿಯುಗಳಂತೆ ಇರುತ್ತವೆ. ಸರಕು ಸಾಗಾಣಿಕೆಗೆ ಬಳಸಲಾಗುವ ಕಂಟೈನರುಗಳಲ್ಲಿ ಇವುಗಳನ್ನು ಸುಧಾರಿತ ತಂತ್ರಜ್ಞಾನ ಬಳಸಿ ಸಿದ್ಧಪಡಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಸಿಬ್ಬಂದಿ ವ್ಯವಸ್ಥೆ:

ಕೆಸಿ ಜನರಲ್ ಆಸ್ಪತ್ರೆಯಲ್ಲಿ ವೈದ್ಯರು, ನರ್ಸ್ ಗಳು ಸೇರಿ ಅರೆ ವೈದ್ಯಕೀಯ ಸಿಬ್ಬಂದಿಯ ಸಾಕಷ್ಟು ಕೊರತೆ ಇದೆ. ಆಂಬುಲೆನ್ಸ್’ಗಳ ಜತೆಗೆ ಅವುಗಳ ಚಾಲಕರ ಕೊರತೆಯೂ ಇದೆ ಎಂದು ವೈದ್ಯರು ಡಿಸಿಎಂ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಈ ಕೊರತೆಯನ್ನು ತಕ್ಷಣವೇ ನಿವಾರಿಸಲಾಗುವುದು. ಜತೆಗೆ ಕೊರತೆ ಇರುವ ವೈದ್ಯಕೀಯ ಸಲಕರಣೆಗಳನ್ನೂ ಕೂಡಲೇ ಆಸ್ಪತ್ರೆಗೆ ಸರಬರಾಜು ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಆಂಟಿಜನ್ ಕಿಟ್ ಗಳ ತೀವ್ರ ಕೊರತೆ ಇದ್ದು ಅವುಗಳನ್ನು ತಕ್ಷಣ ಪೂರೈಸಬೇಕು ಎಂದು ವೈದ್ಯರು ಮಾಡಿದ ಮನವಿಗೆ ಸ್ಪಂದಿಸಿ, ನಿಮಗೆ ಎಷ್ಟು ಲಕ್ಷ ಕಿಟ್ ಗಳು ಬೇಕಾದರೂ ಪೂರೈಕೆ ಮಾಡುತ್ತೇವೆ. ಆ ಬಗ್ಗೆ ಚಿಂತೆ ಬಿಡಿ. ರೋಗಿಗಳ ಕಡೆ ಹೆಚ್ಚು ಗಮನ ಕೊಡಿ. ಕೋವಿಡ್ ರಹಿತ ರೋಗಿಗಳಿಗೂ ಆದ್ಯತೆಯ ಮೇರೆಗೆ ಚಿಕಿತ್ಸೆ ನೀಡಿ ಎಂದು ಸೂಚಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...