ಮೈಸೂರು: ಕೋವಿಡ್ ಟೆಸ್ಟ್ ಗೆ ಬಂದಿದ್ದ ವ್ಯಕ್ತಿಯೊಬ್ಬ ಜಿಲ್ಲಾಧಿಕಾರಿ ಅವರ ನಂಬರ್ ಕೊಟ್ಟು ಹೋಗಿದ್ದಾನೆ. ಪರೀಕ್ಷೆಯ ಬಳಿಕ ಆತನಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು ಕಂಟ್ರೋಲ್ ರೂಮ್ ಸಿಬ್ಬಂದಿ ವ್ಯಕ್ತಿ ನೀಡಿದ್ದ ಮೊಬೈಲ್ ನಂಬರ್ ಗೆ ಕರೆ ಮಾಡಿದಾಗ ಜಿಲ್ಲಾಧಿಕಾರಿ ಸ್ವೀಕರಿಸಿದ್ದಾರೆ.
ನಿಮಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಎಲ್ಲಿದ್ದೀರಿ? ಎಂದು ಜಿಲ್ಲಾ ಕಂಟ್ರೋಲ್ ರೂಮ್ ಸಿಬ್ಬಂದಿ ತಿಳಿಸಿದ್ದಾರೆ. ಆಗ ಗಾಬರಿಗೊಂಡ ಜಿಲ್ಲಾಧಿಕಾರಿ ನಾನು ಜಿಲ್ಲಾಧಿಕಾರಿ ಮಾತನಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಬಳಿಕ ಮೊಬೈಲ್ ನಂಬರ್ ಪರಿಶೀಲನೆ ನಡೆಸಿದಾಗ ಅದು ಜಿಲ್ಲಾಧಿಕಾರಿಯವರ ನಂಬರ್ ಎನ್ನುವುದು ಗೊತ್ತಾಗಿದೆ. ಈಗ ಡಿಸಿ ನಂಬರ್ ಕೊಟ್ಟು ಪರಾರಿಯಾಗಿರುವ ಸೋಂಕಿತನಿಗಾಗಿ ಹುಡುಕಾಟ ನಡೆಸಲಾಗಿದೆ.