
ದಾವಣಗೆರೆ: ಜಗಳೂರು ಸಮೀಪದ ಗಿಡ್ಡನಕಟ್ಟೆ ಗ್ರಾಮದಲ್ಲಿ ಗರ್ಭಿಣಿ ಪತ್ನಿಯನ್ನು ಮಚ್ಚಿನಿಂದ ಬರ್ಬರವಾಗಿ ಕೊಂದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಲಕ್ಷ್ಮಿ(21) ಕೊಲೆಯಾದ ಮಹಿಳೆ. ಚಂದ್ರಪ್ಪ(23) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮಾಳಮ್ಮನಹಳ್ಳಿಯ ಲಕ್ಷ್ಮಿ ಹಾಗೂ ಗಿಡ್ಡನಕಟ್ಟೆಯ ಚಂದ್ರಪ್ಪ ಪ್ರೀತಿಸಿದ್ದು, ಅಂತರ್ಜಾತಿ ವಿವಾಹವಾಗಿದ್ದರು. ಕಳೆದ ವರ್ಷ ಮದುವೆಯಾಗಿದ್ದ ಅವರ ನಡುವೆ ಆಗಾಗ ಜಗಳವಾಗುತ್ತಿತ್ತು ಎನ್ನಲಾಗಿದೆ.
ಮನೆಯಲ್ಲಿ ಕುಟುಂಬ ಸದಸ್ಯರು ಇಲ್ಲದ ವೇಳೆಯಲ್ಲಿ ಇಬ್ಬರೂ ಜಗಳವಾಡಿಕೊಂಡಿದ್ದು ಮಚ್ಚಿನಿಂದ ಪತ್ನಿಯ ಕುತ್ತಿಗೆ ಹಾಗೂ ಎದೆಗೆ ಹೊಡೆದು ಕೊಲೆ ಮಾಡಿದ ಚಂದ್ರಪ್ಪ ನೇಣುಹಾ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.