alex Certify ದೈಹಿಕ ಸಂಬಂಧ ಬೆಳೆಸಿ ಕೈಕೊಟ್ಟ ಪ್ರಿಯಕರನ ಮನೆ ಎದುರು ರಾತ್ರಿ ಕಳೆದ ಯುವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೈಹಿಕ ಸಂಬಂಧ ಬೆಳೆಸಿ ಕೈಕೊಟ್ಟ ಪ್ರಿಯಕರನ ಮನೆ ಎದುರು ರಾತ್ರಿ ಕಳೆದ ಯುವತಿ

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕೆರೆಬಿಳಚಿ ಗ್ರಾಮದ ಯುವಕನೊಬ್ಬ ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿ ಕೈಕೊಟ್ಟಿದ್ದಾನೆ. ಇದರಿಂದ ಕಂಗಾಲಾಗಿರುವ ಯುವತಿ, ಯುವಕನ ಮನೆಯ ಎದುರು ಹೋರಾಟ ನಡೆಸಿದ್ದಾಳೆ.

ಸೋಮಲಾಪುರ ತಾಂಡಾದ ಯುವತಿ 5 ವರ್ಷಗಳಿಂದ ಕೆರೆಬಿಳಚಿ ಗ್ರಾಮದ ಯುವಕನನ್ನು ಪ್ರೀತಿಸಿದ್ದು, ಇತ್ತೀಚೆಗೆ ಆತ ದೂರ ಮಾಡಿದ್ದಾನೆ. ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕವಾಗಿ ಬಳಸಿಕೊಂಡು ದೂರ ಮಾಡುತ್ತಿರುವುದಕ್ಕೆ ಯುವತಿ ಆಕ್ಷೇಪಿಸಿದ ನಂತರ ಯುವಕ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.

ಪ್ರಿಯಕರ ನಾಪತ್ತೆಯಾಗಿದ್ದರಿಂದ ಕಂಗಾಲಾದ ಯುವತಿ ಆತನ ಮನೆ ಎದುರು ಕುಳಿತುಕೊಂಡಿದ್ದಾಳೆ. ಈ ವೇಳೆ ಯುವಕನ ಮನೆಯವರು ಯುವತಿ ಮತ್ತು ಆಕೆಯ ಜೊತೆ ಬಂದಿದ್ದವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ರಾತ್ರಿಯೆಲ್ಲ ಯುವಕನ ಮನೆಯೆದುರು ಯುವತಿ ಅಳುತ್ತಿರುವುದನ್ನು ಗಮನಿಸಿದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಸ್ಥಳಕ್ಕೆ ಆಗಮಿಸಿದ ಬಸವಾಪಟ್ಟಣ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...