ಬೆಂಗಳೂರು: ದಸರಾ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಜನ ಖರೀದಿಯಲ್ಲಿ ತೊಡಗಿದ್ದು, ಮಾರುಕಟ್ಟೆಗಳಲ್ಲಿ ಭಾರೀ ಜನಜಂಗುಳಿ ಕಂಡುಬಂದಿದೆ.
ಕೆಆರ್ ಮಾರ್ಕೆಟ್ ನಲ್ಲಿ ಖರೀದಿ ಜೋರಾಗಿದ್ದು, ಕೊರೊನಾ ಭೀತಿ ಇಲ್ಲದೆ, ನಿಯಮ ಪಾಲಿಸದೇ ಜನಜಾತ್ರೆಯೇ ಕಂಡುಬಂದಿದೆ. ಕೆಆರ್ ಮಾರ್ಕೆಟ್ ಕೊಯಂಬೇಡು ಮಾರ್ಕೆಟ್ ಆಗುತ್ತದೆಯೇ ಎನ್ನುವ ಆತಂಕ ಮೂಡಿದೆ. ಒಂದೇ ಒಂದು ದಿನ ತಮಿಳುನಾಡಿನ ಕೊಯಂಬೇಡು ಮಾರ್ಕೆಟ್ ಓಪನ್ ಆಗಿ ಸಾವಿರಾರು ಜನರಿಗೆ ಕೊರೊನಾ ಸೋಂಕು ಹರಡಲು ಕಾರಣವಾಗಿತ್ತು. ಅದೇ ರೀತಿ ಕೆಆರ್ ಮಾರುಕಟ್ಟೆ ಕೂಡ ಆಗುವುದೇ ಎನ್ನುವ ಆತಂಕ ಮೂಡಿದೆ.
ಕೆಆರ್ ಮಾರುಕಟ್ಟೆ ಸೇರಿ ಹಲವೆಡೆ ಭಾರೀ ಜನಜಂಗುಳಿ ಕಂಡುಬಂದಿದೆ. ಮಾಸ್ಕ್ ಧರಿಸದೆ ಮಾರುಕಟ್ಟೆಗೆ ಬಂದ ಗ್ರಾಹಕರಿಗೆ ದಂಡ ವಿಧಿಸಲಾಗಿದೆ. ಬಿಬಿಎಂಪಿ ಮಾರ್ಷಲ್ ಗಳು ಮಾಸ್ಕ್ ಧರಿಸದವರಿಗೆ ದಂಡ ಹಾಕಿದ್ದಾರೆ. ಆದರೆ, ಅತಿಹೆಚ್ಚಿನ ಜನ ಮಾಸ್ಕ್ ಇಲ್ಲದೇ ಓಡಾಡುತ್ತಿರುವುದು ಕಂಡು ಬಂದಿದೆ. ಯಶವಂತಪುರ ಮಾರ್ಕೆಟ್ ಸೇರಿದಂತೆ ಹಲವೆಡೆ ಮಾಸ್ಕ್ ಧರಿಸದೇ ಅಂತರ ಕಾಯ್ದುಕೊಳ್ಳದೇ ಜನ ಖರೀದಿಯಲ್ಲಿ ತೊಡಗಿದ್ದಾರೆ.