ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಮೊಮ್ಮಗ ಹಾಗೂ ಉದ್ಯಮಿ ದಿ.ವಿ.ಜಿ. ಸಿದ್ದಾರ್ಥ್ ಹೆಗ್ಡೆ ಅವರ ಪುತ್ರ ಅಮಾರ್ತ್ಯ ಹೆಗಡೆ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಅವರ ಮದುವೆ ನಿಶ್ಚಯವಾಗಿದೆ.
ಅಮಾರ್ತ್ಯ ಹೆಗಡೆ ಮತ್ತು ಐಶ್ವರ್ಯ ಹಿರಿಯರ ಸಮ್ಮುಖದಲ್ಲಿ ಸೋಮವಾರ ಹಾರ ಬದಲಿಸಿಕೊಂಡಿದ್ದಾರೆ. ಡಿ.ಕೆ. ಶಿವಕುಮಾರ್ ಅವರ ನಿವಾಸದಲ್ಲಿ ಕುಟುಂಬದವರ ಸಮ್ಮುಖದಲ್ಲಿ ಮದುವೆ ನಿಶ್ಚಯವಾಗಿದೆ. ಆಗಸ್ಟ್ ಮೊದಲ ವಾರದಲ್ಲಿ ನಿಶ್ಚಿತಾರ್ಥ ನೆರವೇರಲಿದೆ.
ಎರಡು ಕುಟುಂಬದ ಹಿರಿಯರು ತಾಂಬೂಲ ಶಾಸ್ತ್ರ ನೆರವೇರಿಸಿ ಮದುವೆ ನಿಶ್ಚಯ ಮಾಡಿಕೊಂಡಿದ್ದಾರೆ. ಹಾರ ಬದಲಿಸಿಕೊಂಡ ಐಶ್ವರ್ಯ ಮತ್ತು ಅಮಾರ್ತ್ಯ ಹೆಗಡೆ ಹಿರಿಯರ ಆಶೀರ್ವಾದ ಪಡೆದುಕೊಂಡಿದ್ದಾರೆ.