ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ನಿರೂಪಕಿ ಅನುಶ್ರೀ ವಿಚಾರಣೆ ನಡೆಸದಂತೆ ಪ್ರಭಾವ ಬೀರಿದ ಮಾಜಿ ಸಿಎಂ ಹೆಸರು ಬಹಿರಂಗಪಡಿಸುವಂತೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆಗ್ರಹಿಸಿರುವುದಕ್ಕೆ ಸಚಿವ ಸಿ.ಟಿ. ರವಿ ತಿರುಗೇಟು ನೀಡಿದ್ದಾರೆ.
ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಸಲಹೆ ಕೊಡುವಷ್ಟು ನಾನು ದೊಡ್ಡವನಲ್ಲ. ಅನಧಿಕೃತ ಸುದ್ದಿಗೆ ಮಾಜಿ ಸಿಎಂ ಉತ್ತರಿಸಬೇಕಾಗಿರಲಿಲ್ಲ. ಸುದ್ದಿಮೂಲ ಕೆದಕಿಕೊಂಡು ಹೋಗಬಾರದು ಎಂದು ಸಿ.ಟಿ. ರವಿ ಹೇಳಿದ್ದಾರೆ.
ಡ್ರಗ್ಸ್ ಪ್ರಕರಣದಲ್ಲಿ ಪ್ರಭಾವಿ ರಾಜಕಾರಣಿಗಳ ಹೆಸರು ವಿಚಾರಕ್ಕೆ ಸಂಬಂಧಿಸಿದಂತೆ ಅನಧಿಕೃತ ಸುದ್ದಿಗಳಿಗೆ ಉತ್ತರಿಸಬೇಕಿಲ್ಲ. ಬಹಳ ಸಲ ಹೆಣ್ಣಿನ ಮೂಲವನ್ನು ಅರಿಯಲು ಆಗುವುದಿಲ್ಲ. ಅದೇ ರೀತಿ ಸುದ್ದಿಯ ಮೂಲವನ್ನು ಹುಡುಕಬಾರದು, ಕೆದಕಿಕೊಂಡು ಹೋಗಬಾರದು ಎಂದು ತಿಳಿಸಿದ್ದಾರೆ.