ಕಲಬುರ್ಗಿ ಜಿಲ್ಲೆ ಶಹಬಾದ್ ತಾಲೂಕಿನ ಶಂಕರವಾಡಿ ಗ್ರಾಮದ ಬಳಿ ವಿದ್ಯುತ್ ಪ್ರವಹಿಸಿ ಬಾಲಕ ಮತ್ತು ಹಸು ಸಾವನ್ನಪ್ಪಿದ ಘಟನೆ ನಡೆದಿದೆ.
ವಿದ್ಯುತ್ ತಂತಿಗೆ ಸಿಲುಕಿ ಒದ್ದಾಡುತ್ತಿದ್ದ ಹಸುವನ್ನು ರಕ್ಷಿಸಲು ಹೋದ ಬಾಲಕ ಸಾವನ್ನಪ್ಪಿದ್ದಾನೆ. 15 ವರ್ಷದ ಬೀರಣ್ಣ ಭೀಮಾಶಂಕರ ಮೃತಪಟ್ಟ ಬಾಲಕ ಎಂದು ಹೇಳಲಾಗಿದೆ.
ಶಂಕರವಾಡಿ ಗ್ರಾಮದ ಹೊರವಲಯದಲ್ಲಿ ದನಗಳನ್ನು ಮೇಯಿಸಲು ಹೋಗಿದ್ದ ವೇಳೆ ತಂತಿ ತಾಗಿ ವಿದ್ಯುತ್ ಪ್ರವಹಿಸಿದ್ದರಿಂದ ಹಸು ಒದ್ದಾಡಿದೆ. ಇದನ್ನು ಗಮನಿಸಿ ಹಸುವನ್ನು ರಕ್ಷಿಸಲು ಹೋದ ಬೀರಣ್ಣನಿಗೂ ವಿದ್ಯುತ್ ಪ್ರವಹಿಸಿದೆ ಬಾಲಕ ಹಾಗೂ ಹಸು ಸ್ಥಳದಲ್ಲೇ ಸಾವನ್ನಪ್ಪಿದ್ದು, ಶಹಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.