ಬೆಂಗಳೂರು: ಅಗತ್ಯವಿಲ್ಲದಿದ್ದರೂ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ ಎಂದು ವೈದ್ಯಾಧಿಕಾರಿಗಳ ಸಂಘದ ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರತಿದಿನ ಕೋವಿಡ್ ಟೆಸ್ಟ್ ಗೆ 4 ಕೋಟಿ ರೂಪಾಯಿ ಖರ್ಚಾಗುತ್ತದೆ. ಬಿಬಿಎಂಪಿಯಿಂದ ಪ್ರತಿದಿನ 25 ಸಾವಿರದಷ್ಟು ಕೋವಿಡ್ ಟೆಸ್ಟ್ ಮಾಡಲಾಗುತ್ತಿದ್ದು, ಕೇವಲ ಎರಡರಿಂದ ಮೂರು ಸಾವಿರ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಅಗತ್ಯವಿಲ್ಲದಿದ್ದರೂ ಕೊರೋನಾ ಪರೀಕ್ಷೆ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.
ಸ್ಲಂಗಳು, ಕಟ್ಟಡ ಕಾರ್ಮಿಕರಿಗೆ ಕೋವಿಡ್ ಟೆಸ್ಟ್ ಅನಗತ್ಯವಾಗಿದೆ. ಸಂಪರ್ಕ ಹೊಂದಿದವರಿಗೆ ಟೆಸ್ಟ್ ಮಾಡಬೇಕು. ಇತರೆ ಕಾಯಿಲೆಯಿಂದ ಬಳಲುತ್ತಿದ್ದರೂ ಟೆಸ್ಟ್ ಮಾಡಬೇಕು. ಅದನ್ನು ಬಿಟ್ಟು ಸ್ಲಂಗಳಲ್ಲಿ, ಕಟ್ಟಡ ಕಾರ್ಮಿಕರಿಗೆ ಕೋವಿಡ್ ಟೆಸ್ಟ್ ಬೇಡ. ವೈಜ್ಞಾನಿಕವಾಗಿ ಕೋವಿಡ್ ಟೆಸ್ಟ್ ಮಾಡಿದರೆ ಒಳ್ಳೆಯದು ಎಂಬುದು ರಾಜ್ಯ ವೈದ್ಯಾಧಿಕಾರಿಗಳ ಸಂಘದ ಅಭಿಪ್ರಾಯವಾಗಿದೆ ಎನ್ನಲಾಗಿದೆ.