ಮೈಸೂರು: ತುಂಬು ಗರ್ಭಿಣಿ ಕೊರೊನಾ ಸೋಂಕಿತೆಯನ್ನು ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆಯೇ ಆಂಬುಲೆನ್ಸ್ ನಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಟಿ.ನರಸಿಪುರ ಮೂಲದ 26 ವರ್ಷದ ತುಂಬು ಗರ್ಭಿಣಿ ಸವಿತಾ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ವೈದ್ಯಾಧಿಕಾರಿಗಳ ಸೂಚನೆ ಮೇರೆಗೆ ಸೋಂಕಿತೆ ಗರ್ಭಿಣಿಯನ್ನು ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಮಾರ್ಗಮಧ್ಯೆಯೇ ಹೆರಿಗೆ ನೋವು ಆರಂಭವಾಗಿ ಆಂಬುಲೆನ್ಸ್ ನಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ.
ಪೇಟಿಎಂ ಬಳಕೆದಾರರಿಗೆ ಖುಷಿ ಸುದ್ದಿ..! ಪಾವತಿ ವೇಳೆ ನೀಡಬೇಕಾಗಿಲ್ಲ ಈ ಶುಲ್ಕ
ಸದ್ಯ ತಾಯಿ, ಮಗುವನ್ನು ವಿವಿ ಪುರಂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಗು ಆರೋಗ್ಯವಾಗಿದೆ ಎಂದು ತಿಳಿದುಬಂದಿದೆ.