alex Certify ರಾಜ್ಯ ರಾಜಧಾನಿಯ ಕೊರೊನಾ ಸೋಂಕಿನ ಕುರಿತು ತಜ್ಞರಿಂದ ಶಾಕಿಂಗ್ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯ ರಾಜಧಾನಿಯ ಕೊರೊನಾ ಸೋಂಕಿನ ಕುರಿತು ತಜ್ಞರಿಂದ ಶಾಕಿಂಗ್ ಮಾಹಿತಿ

ಕೊರೊನಾ ಎರಡನೆ ಅಲೆ ಜೋರಾಗಿದ್ದು‌, ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೇಸ್​ಗಳು ಹೆಚ್ಚೆಚ್ಚು ಸಂಖ್ಯೆಯಲ್ಲಿ ವರದಿಯಾಗುತ್ತಲೇ ಇದೆ. ದೇಶದಲ್ಲೇ 2ನೇ ಅತಿ ಹೆಚ್ಚು ಪ್ರಕರಣಗಳನ್ನ ವರದಿ ಮಾಡುತ್ತಿರುವ ರಾಜ್ಯ ಕರ್ನಾಟಕವಾಗಿದೆ.

ಇದೇ ರೀತಿ ಪ್ರಕರಣಗಳು ರಾಜ್ಯದಲ್ಲಿ ಮುಂದುವರಿದ್ರೆ ಮೇ 17ರವರೆಗೆ ಬೆಂಗಳೂರಿನಲ್ಲಿ ಕೋವಿಡ್​ ಪ್ರಕರಣಗಳು ಹೆಚ್ಚೆಚ್ಚು ವರದಿಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕಂಪ್ಯೂಟೇಷನಲ್​ ಹಾಗೂ ಡೇಟಾ ಸೈನ್ಸ್ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಮುಂದಿನ ವಾರದಿಂದ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಇನ್ನಷ್ಟು ಹೆಚ್ಚಾಗಲಿವೆ ಎಂದು ಅಂದಾಜಿಸಲಾಗಿದೆ. ಮೇ 17ರಿಂದ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಅತ್ಯಧಿಕವಾಗಲಿದೆ. ಜೂನ್​ 11ರ ಸುಮಾರಿಗೆ ಬೆಂಗಳೂರಿನಲ್ಲಿ ಸುಮಾರು 14 ಸಾವಿರ ಮಂದಿ ಕೊರೊನಾದಿಂದ ಸಾವಿಗೀಡಾಗಬಹುದು ಎಂದು ಅಂದಾಜಿಸಲಾಗಿದೆ.

ರಾಜ್ಯದಲ್ಲಿ ಭಾನುವಾರ ಬರೋಬ್ಬರಿ 47, 930 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದೆ. ಈ ಮೂಲಕ 48,401 ಕೇಸ್​ಗಳನ್ನ ವರದಿ ಮಾಡಿದ ಮಹಾರಾಷ್ಟ್ರವನ್ನ ಹಿಂದಿಕ್ಕಲು ಕೆಲವೇ ಸಂಖ್ಯೆಗಳು ಬಾಕಿ ಉಳಿದಿದೆ. ಅಲ್ಲದೇ ಕರ್ನಾಟಕ ದೇಶದಲ್ಲಿ ಅತೀ ಹೆಚ್ಚು ಕೊರೊನಾ ಪ್ರಕರಣಗಳನ್ನ ವರದಿ ಮಾಡ್ತಿರೋ ರಾಜ್ಯಗಳ ಪೈಕಿ 2ನೇ ಸ್ಥಾನವನ್ನ ಪಡೆದುಕೊಂಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...