alex Certify ಕೊರೊನಾ ಸೋಂಕಿತರಿಗೆ ಉಚಿತ ಆಹಾರ ನೀಡುತ್ತಿರುವ ಬೆಂಗಳೂರಿನ ಟಿಫಿನ್​ ಸರ್ವೀಸ್​ಗಳ ಬಗ್ಗೆ ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸೋಂಕಿತರಿಗೆ ಉಚಿತ ಆಹಾರ ನೀಡುತ್ತಿರುವ ಬೆಂಗಳೂರಿನ ಟಿಫಿನ್​ ಸರ್ವೀಸ್​ಗಳ ಬಗ್ಗೆ ಇಲ್ಲಿದೆ ಮಾಹಿತಿ

ದೇಶದಲ್ಲಿ ಕೊರೊನಾ ಆರ್ಭಟ ಮುಂದುವರಿದಿದ್ದು ಸೋಂಕಿನ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಏರುತ್ತಲೇ ಇದೆ. ಸೋಂಕು ನಿಯಂತ್ರಣಕ್ಕಾಗಿ ದೇಶದ ವಿವಿಧ ರಾಜ್ಯಗಳು ಲಾಕ್​ಡೌನ್​ ಹಾಗೂ ವೀಕೆಂಡ್​ ಕರ್ಫ್ಯೂಗಳನ್ನ ಜಾರಿ ಮಾಡಿದೆ.

ಈ ನಡುವೆ ಅನೇಕ ಕೋವಿಡ್​ ಸೋಂಕಿತರು ಹಾಗೂ ಅವರ ಕುಟುಂಬಸ್ಥರು ಆರೋಗ್ಯಯುತ ಆಹಾರಕ್ಕಾಗಿ ಪರಿತಪಿಸುವಂತಾಗಿದೆ. ಈ ರೀತಿ ಹುಡುಕಾಟದಲ್ಲಿ ನೀವೂ ಇದ್ದರೆ ಬೆಂಗಳೂರಿನ ಕೆಲ ಟಿಫಿನ್​ ಸರ್ವೀಸ್​ಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ. ಈ ಟಿಫಿನ್​ ಸರ್ವೀಸ್​ಗಳು ಸೋಂಕಿತರಿಗೆ ಮನೆಯಲ್ಲೇ ತಯಾರು ಮಾಡಿದ ಆರೋಗ್ಯಯುತ ಖಾದ್ಯಗಳನ್ನ ತಲುಪಿಸುವ ಕಾರ್ಯ ಮಾಡುತ್ತಿವೆ.

1. ರೆಸಿಪಿ ಆಫ್​ ಹೋಪ್​ : ನಾಲ್ಕು ಡೆಲಿವರಿ ಕಿಚನ್​ ಸರ್ವೀಸ್​ ಸೇರಿ ಕೋವಿಡ್​ ರೋಗಿಗಳಿಗೆ ಉಚಿತ ಆಹಾರ ನೀಡಲು ಮುಂದಾಗಿವೆ. ಇವರು ಪ್ರತಿ ರೋಗಿಗೆ ಉಚಿತವಾಗಿ ದಾಲ್​, ಪಲ್ಯ, ಮೂರು ಚಪಾತಿ, ಸ್ವಲ್ಪ ಅನ್ನವನ್ನ ನೀಡುತ್ತಾರೆ.

2. ಮಿಷನ್​ ಚಾಯ್​ : ಇದು ಕ್ಯಾನ್ಸರ್​ ರೋಗಿಗಳಿಗೆ ಚಹ ಸೇವೆ ನೀಡುವ ಮೂಲಕ ಸುದ್ದಿ ಮಾಡಿತ್ತು. ಇದೀಗ ಕೋವಿಡ್​ ರೋಗಿಗಳಿಗೂ ಸಹಾಯ ಮಾಡಲು ಮುಂದಾಗಿದೆ. ಓಲ್ಡ್​ ಏರ್​ಪೋರ್ಟ್​ ರಸ್ತೆಯಲ್ಲಿ ಈ ಮಿಷನ್​ ಚಾಯ್​ ಇದ್ದು ಅಲ್ಲಿಂದ 7 -8 ಕಿಲೋಮೀಟರ್​ ದೂರದವರೆಗಿನ ಕೋವಿಡ್​ ರೋಗಿಗಳಿಗೆ ಉಚಿತ ಊಟ ನೀಡುತ್ತಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...