ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ನಿವಾಸಿಯಾಗಿರುವ ಕಾದಂಬರಿಕಾರ ಡಿ.ಸಿ. ಪಾಣಿ ಕೋವಿಡ್ ಲಸಿಕೆ ಪ್ರಯೋಗಕ್ಕೆ ಒಳಗಾಗಿದ್ದಾರೆ.
ಬೆಳಗಾವಿಯ ಜೀವನ್ ರೇಖಾ ಆಸ್ಪತ್ರೆಯಲ್ಲಿ ಕೋವಿಡ್-19 ಪ್ರಾಯೋಗಿಕ ಲಸಿಕೆಯನ್ನು ಅವರಿಗೆ ನೀಡಲಾಗಿದೆ. ಮೊದಲನೇ ಹಂತದ ಪ್ರಾಯೋಗಿಕ ಲಸಿಕೆಯನ್ನು ಪಾಣಿಯವರು ಹಾಕಿಸಿಕೊಂಡಿದ್ದಾರೆ. ಡಾ. ಪರಿತೋಷ್ ವಿ. ದೇಸಾಯಿ ಫಾರ್ಮಾಜೆಟ್ ಮೂಲಕ ಲಸಿಕೆ ನೀಡಿದ್ದಾರೆ.
ಇದೊಂದು ಅವಿಸ್ಮರಣೀಯ ಘಟನೆಯಾಗಿದ್ದು, ಅತ್ಯಂತ ಪರಿಣಾಮಕಾರಿ ಲಸಿಕೆ ನಮ್ಮ ದೇಶದಲ್ಲಿ ಉತ್ಪಾದನೆಯಾಗಲಿದೆ. ಜನ ಕೊರೋನಾಗೆ ಆತಂಕ ಪಡುವ ಅಗತ್ಯವಿಲ್ಲ. ಕೊರೋನಾ ಸೋಂಕು ಶೀಘ್ರದಲ್ಲೇ ನಿವಾರಣೆಯಾಗಲಿದೆ ಎಂದು ಪಾಣಿ ಹೇಳಿದ್ದಾರೆ.
ಅವರು ಪ್ರಯೋಗಕ್ಕೆ ಒಳಗಾಗಲು ಸ್ವಂತ ಇಚ್ಛೆಯಿಂದ ಸಿದ್ಧವಿರುವುದಾಗಿ ತಿಳಿಸಿದ ನಂತರ ಆಗಸ್ಟ್ 3 ರಂದು ಬೆಳಗಾವಿಯಲ್ಲಿ ಅವರ ಆರೋಗ್ಯ ತಪಾಸಣೆ ನಡೆಸಿ ಲಸಿಕೆ ನೀಡಲಾಗಿದೆ.