
ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 445 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 144 ಮಂದಿಗೆ ಸೋಂಕು ತಗುಲಿದೆ. ಬಳ್ಳಾರಿ 47, ಕಲಬುರಗಿ 42, ಕೊಪ್ಪಳ 36, ದಕ್ಷಿಣ ಕನ್ನಡ 33, ಧಾರವಾಡ 30, ರಾಯಚೂರು 14, ಗದಗ 12, ಚಾಮರಾಜನಗರ 11 ಜನರಿಗೆ ಸೋಂಕು ತಗುಲಿದೆ.
ಉಡುಪಿ 9, ಯಾದಗಿರಿ 7, ಮಂಡ್ಯ, ಉತ್ತರ ಕನ್ನಡ, ಬಾಗಲಕೋಟೆ, ಶಿವಮೊಗ್ಗ, ಕೋಲಾರ ತಲಾ 6, ಮೈಸೂರು 5, ಚಿಕ್ಕಮಗಳೂರು, ಕೊಡಗು ತಲಾ 4, ಹಾಸನ, ಬೆಂಗಳೂರು ಗ್ರಾಮಾಂತರ ತಲಾ 3, ವಿಜಯಪುರ, ತುಮಕೂರು, ಹಾವೇರಿ ತಲಾ 2, ಬೀದರ್, ಬೆಳಗಾವಿ, ದಾವಣಗೆರೆ, ರಾಮನಗರ, ಚಿತ್ರದುರ್ಗ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.