ಬೆಂಗಳೂರು: ರಾಜ್ಯದಲ್ಲಿ ಇಂದು 317 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, 7 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 79, ಕಲಬುರ್ಗಿ 63, ಬಳ್ಳಾರಿ 53, ಬೆಂಗಳೂರು ನಗರ 47, ಧಾರವಾಡ 8, ಉಡುಪಿ 7, ಶಿವಮೊಗ್ಗ 7, ಯಾದಗಿರಿ 6, ರಾಯಚೂರು 6, ಉತ್ತರ ಕನ್ನಡ 6, ಹಾಸನ 5, ವಿಜಯಪುರ, ಮೈಸೂರು, ಗದಗ, ರಾಮನಗರ, ಚಿಕ್ಕಮಗಳೂರು, ಕೊಪ್ಪಳ ತಲಾ 4, ಬೀದರ್ 2, ಬೆಳಗಾವಿ 3, ಬೀದರ್ 2, ತುಮಕೂರು ಒಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಕಲಬುರ್ಗಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1007 ಕ್ಕೆ ಏರಿಕೆಯಾಗಿದ್ದು 523 ಸಕ್ರಿಯ ಪ್ರಕರಣಗಳು ಇವೆ. ಉಡುಪಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1035 ಇದ್ದು, 217 ಸಕ್ರಿಯ ಪ್ರಕರಣಗಳಿವೆ.
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 7530 ಆಗಿದ್ದು, 4456 ಜನ ಡಿಸ್ಚಾರ್ಜ್ ಆಗಿದ್ದಾರೆ. 2976 ಸಕ್ರಿಯ ಪ್ರಕರಣ ಇವೆ