ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 6706 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರು 1893, ಮೈಸೂರು 522, ಬಳ್ಳಾರಿ 445, ಉಡುಪಿ 402, ದಾವಣಗೆರೆ 328 ಜನರಿಗೆ ಕೊರೋನಾ ಪಾಸಿಟವ್ ವರದಿ ಬಂದಿದೆ.
ಬೆಳಗಾವಿ 288, ಕಲಬುರ್ಗಿ 285, ಧಾರವಾಡ 257, ದಕ್ಷಿಣಕನ್ನಡ 246, ರಾಯಚೂರು 181, ಕೊಪ್ಪಳ 148, ಬಾಗಲಕೋಟೆ 143, ಬೀದರ್ 143, ಮಂಡ್ಯ 130, ಹಾಸನ 129, ವಿಜಯಪುರ 121, ಚಿಕ್ಕಮಗಳೂರು 111, ಶಿವಮೊಗ್ಗ 105 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ.
ಗದಗ 98, ಹಾವೇರಿ 96, ತುಮಕೂರು 85, ಯಾದಗಿರಿ 83, ಕೋಲಾರ 77, ಬೆಂಗಳೂರು ಗ್ರಾಮಾಂತರ 70, ಚಿತ್ರದುರ್ಗ 67, ಉತ್ತರಕನ್ನಡ 64, ಚಾಮರಾಜನಗರ 56, ಕೊಡಗು 55, ರಾಮನಗರ 53, ಚಿಕ್ಕಬಳ್ಳಾಪುರ 25 ಜನರಿಗೆ ಕೊರೊನಾ ಸೋಂಕು ತಗುಲಿದೆ.
ಇಂದು ಬೆಂಗಳೂರಿನಲ್ಲಿ 22, ಮೈಸೂರಲ್ಲಿ 12, ಬಳ್ಳಾರಿಯಲ್ಲಿ 9, ಬೆಳಗಾವಿ 6, ಕಲಬುರ್ಗಿ 9, ಧಾರವಾಡ 6, ದಕ್ಷಿಣಕನ್ನಡ 6, ಕೊಪ್ಪಳ 5 ಜನ ಸೇರಿದಂತೆ ರಾಜ್ಯದಲ್ಲಿ ಇಂದು 103 ಮಂದಿ ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ.