ಯಾದಗಿರಿ: ಯಾದಗಿರಿ ತಾಲೂಕಿನ ಅಲ್ಲಿಪುರ ತಾಂಡಾದಲ್ಲಿ ಕೊರೋನಾ ಪಾಸಿಟಿವ್ ವರದಿ ಬಂದ ಪರಿಣಾಮ ಮದುವೆಯನ್ನು ರದ್ದು ಮಾಡಲಾಗಿದೆ.
ವಧುವಿನ ತಂದೆ ಮತ್ತು ಸಹೋದರನಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು ಮದುವೆ ಸಂಭ್ರಮದ ಮನೆಯಲ್ಲಿ ಮೌನ ಆವರಿಸಿದೆ. ಮಹಾರಾಷ್ಟ್ರಕ್ಕೆ ಹೋಗಿದ್ದ ಕುಟುಂಬದವರು ಇತ್ತೀಚೆಗೆ ವಾಪಸಾಗಿದ್ದರು. ಮಗಳ ಮದುವೆಗಾಗಿ ಎಲ್ಲಾ ತಯಾರಿ ನಡೆಸಲಾಗಿದ್ದು ಯಾದಗಿರಿಗೆ ಬಂದ ಕುಟುಂಬದವರನ್ನು ಸಾಂಸ್ಥಿಕ ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು.
ಮೇ 31ರಂದು ಕ್ವಾರಂಟೈನ್ ಮುಕ್ತಾಯವಾಗಿ ಮದುವೆಗೆ ತಯಾರಿ ನಡೆಸಿದ್ದು ಆಪ್ತರು ಬಂಧುಗಳನ್ನು ಆಹ್ವಾನಿಸಲಾಗಿದೆ. ಮಂಗಳವಾರ ಬಂದ ವೈದ್ಯಕೀಯ ವರದಿಯಲ್ಲಿ ವಧುವಿನ ತಂದೆ ಮತ್ತು ಸಹೋದರನಿಗೆ ಕೊರೋನಾ ಸೋಂಕು ಇರುವುದು ಗೊತ್ತಾಗಿದ್ದು, ಈ ಹಿನ್ನೆಲೆಯಲ್ಲಿ ಮದುವೆ ರದ್ದುಪಡಿಸಲಾಗಿದೆ.