ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 267 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 4063 ಕ್ಕೆ ಏರಿಕೆಯಾಗಿದೆ.
ಕಲಬುರ್ಗಿಯಲ್ಲಿ ಇವತ್ತು ಒಂದೇ ದಿನ ಬರೋಬ್ಬರಿ 105 ಮಂದಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಉಡುಪಿಯಲ್ಲಿ 62, ಬೆಂಗಳೂರು ನಗರದಲ್ಲಿ 20, ಮಂಡ್ಯ ಜಿಲ್ಲೆಯಲ್ಲಿ 13 ಮಂದಿಗೆ ಸೋಂಕು ತಗುಲಿದೆ.
ರಾಯಚೂರು 35, ಯಾದಗಿರಿ 9, ವಿಜಯಪುರ 6 ಮಂದಿ ಸೇರಿದಂತೆ ಒಟ್ಟು 267 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ಗೊತ್ತಾಗಿದೆ. ಕಲ್ಬುರ್ಗಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 510 ಕ್ಕೆ ಏರಿಕೆಯಾಗಿದ್ದು ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿರುವ ಉಡುಪಿಯಲ್ಲಿ 472 ಮಂದಿಗೆ ಸೋಂಕಿತರ ಸಂಖ್ಯೆ ಇದೆ. ಬೆಂಗಳೂರು ನಗರದಲ್ಲಿ 417, ಮಂಡ್ಯದಲ್ಲಿ 302, ಯಾದಗಿರಿ 299, ರಾಯಚೂರು 268, ಬೆಳಗಾವಿ 211, ಹಾಸನ 183, ಬೀದರ್ 175, ದಾವಣಗೆರೆ 166 ಮಂದಿ ಒಟ್ಟು ಸೋಂಕಿತರಿದ್ದಾರೆ.