ಬಾಗಲಕೋಟೆ: ಲಾಕ್ಡೌನ್ ಸಲ್ಲಿಕೆಯಾದ ನಂತರ ರಾಜ್ಯದಲ್ಲಿ ಬಸ್ ಸಂಚಾರ ಆರಂಭವಾಗಿದೆ. ಕೆಲ ಮಾರ್ಗಗಳಲ್ಲಿ ಅಂತರಾಜ್ಯ ಬಸ್ ಸಂಚಾರ ಆರಂಭಿಸಿದ್ದು, ಉಳಿದ ಮಾರ್ಗಗಳಿಗೂ ಬಸ್ ಸೇವೆ ಆರಂಭಿಸಲಾಗುವುದು ಎಂದು ಸಾರಿಗೆ ಸಚಿವರಾದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾಹಿತಿ ನೀಡಿದ್ದಾರೆ.
ಈಗಾಗಲೇ ಹಲವು ರಾಜ್ಯಗಳಿಗೆ ಬಸ್ ಸಂಚಾರ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಆಂಧ್ರಪ್ರದೇಶ ತೆಲಂಗಾಣಕ್ಕೆ ಬಸ್ ಸಂಚಾರ ಆರಂಭವಾಗಲಿದ್ದು ರೆಡ್ ಜೋನ್ ಪ್ರದೇಶಗಳಿಗೆ ಬಸ್ ಸಂಚಾರ ಇರುವುದಿಲ್ಲ. ಗ್ರೀನ್ ಜೋನ್ ಗಳಲ್ಲಿ ಬಸ್ ಸೇವೆ ಇರುತ್ತದೆ ಎಂದು ತಿಳಿಸಿದ್ದಾರೆ.
ಆಂಧ್ರಪ್ರದೇಶ, ತಮಿಳುನಾಡು ಸರ್ಕಾರಗಳಿಗೆ ಪತ್ರ ಬರೆದು ಬಸ್ ಸಂಚಾರ ಆರಂಭಿಸಲು ಕೇಳಲಾಗಿದೆ. ಅದೇ ರೀತಿ ಮಹಾರಾಷ್ಟ್ರದಲ್ಲಿ ಕೊರೋನಾ ನಿಯಂತ್ರಣವಾಗುವವರೆಗೆ ಬಸ್ ಸಂಚಾರ ಆರಂಭಿಸದಿರಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.