ನವದೆಹಲಿ: ದೇಶದಲ್ಲಿ ಕೊರೋನಾ ಮೊದಲ ಅಲೆ ಇಳಿಕೆಯಾಗುತ್ತಿದೆ. ಕಳೆದ ಮೂರು ವಾರದಿಂದ ನಿರಂತರವಾಗಿ ಹೊಸ ಸೋಂಕು ಪ್ರಕರಣಗಳು ಕಡಿಮೆಯಾಗತೊಡಗಿದೆ.
94,000 ವರೆಗೂ ಪ್ರತಿದಿನ ಹೊಸ ಕೇಸ್ ಪತ್ತೆಯಾಗುತ್ತಿದ್ದು ಸದ್ಯ 75,000 ಸನಿಹದಲ್ಲಿದೆ. ದೇಶದಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡ 7 ತಿಂಗಳ ನಂತರದಲ್ಲಿ ಇದೇ ಮೊದಲ ಬಾರಿಗೆ ಸೋಂಕು ಪ್ರಮಾಣ ಇಳಿಮುಖವಾಗುತ್ತಿರುವುದು ಖಚಿತವಾಗಿದೆ. ಇದು ದೇಶದ ಮೊದಲ ಕೊರೋನಾ ಅಲೆ ಇಳಿಕೆಯಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಆದರೆ, ಹಬ್ಬಗಳು ಬರುತ್ತಿರುವುದರಿಂದ ಜನ ಎಚ್ಚರ ತಪ್ಪಿದರೆ ಮತ್ತೆ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚಳವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.