ಬೆಂಗಳೂರು: ರಾಜ್ಯದಲ್ಲಿ ಇಂದು 3014 ಜನರಿಗೆ ಕೊರೋನಾ ಪಾಸಿಟಿವ್ ರಿಪೋರ್ಟ್ ಬಂದಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 8,23, 412 ಕ್ಕೆ ಏರಿಕೆಯಾಗಿದೆ.
ಇದರೊಂದಿಗೆ ಸತತ 17ನೇ ದಿನವೂ ಗುಣಮುಖ ಹೊಂದಿದವರ ಸಂಖ್ಯೆ ಹೊಸ ಪ್ರಕರಣಗಳನ್ನು ಮೀರಿಸಿದೆ.
ಮಾಸ್ಕ್ ಧರಿಸುವುದು, ಕೈತೊಳೆಯುವುದು ಮತ್ತು ಭೌತಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೊರೋನಾ ವಿರುದ್ಧದ ಹೋರಾಟವನ್ನು ಮುಂದುವರೆಸೋಣ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.