ಬೆಂಗಳೂರು: ಕೊರೊನಾ ಸೋಂಕಿನ ಬಗ್ಗೆ ನಿರ್ಲಕ್ಷ ಬೇಡ, ಸ್ವಲ್ಪ ತಡ ಮಾಡಿದರೂ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆ ಇದೆ. ಕೊರೊನಾ ಅಟ್ಯಾಕ್ ಆಗಿ 14 ದಿನಕ್ಕೆ ಉಸಿರು ನಿಲ್ಲುವ ಸಾಧ್ಯತೆ ಇರುವುದರಿಂದ ಲಕ್ಷಣ ಕಂಡು ಬಂದ ಕೂಡಲೇ ಆಸ್ಪತ್ರೆಗೆ ಹೋಗುವುದು ಒಳ್ಳೆಯದು ಎಂದು ಹೇಳಲಾಗಿದೆ.
ಅಂದ ಹಾಗೇ, ಬೆಂಗಳೂರು ಜನತೆಗೆ 14 ರ ಆಘಾತ ವಿಪರೀತವಾಗಿ ಕಾಡುತ್ತಿದೆ. ಕೊರೊನಾ ಉಲ್ಬಣವಾದ ವೈದ್ಯರು ಏನು ಮಾಡಲು ಆಗುವುದಿಲ್ಲ. ತಡಮಾಡಿ ಆಸ್ಪತ್ರೆಗೆ ಹೋಗುವವರ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ.
ಕೆಲವರು ಸಣ್ಣ ಪ್ರಮಾಣದಲ್ಲಿ ರೋಗ ಲಕ್ಷಣ ಕಾಣಿಸಿಕೊಂಡಾಗ ತಾವೇ ಮಾತ್ರೆ ನುಂಗಿ ಮನೆಯಲ್ಲೇ ಉಳಿಯುತ್ತಾರೆ. ತಡವಾಗಿ ಆಸ್ಪತ್ರೆಗೆ ಸೇರಿ ವೆಂಟಿಲೇಟರ್ ಗೆ ಹೋದಲ್ಲಿ ಬದುಕುವುದು ಕಷ್ಟ. ಆಸ್ಪತ್ರೆಗೆ ದಾಖಲಾದ 14 ದಿನದೊಳಗೆ ಸಾಯುವವರ ಸಂಖ್ಯೆ ಹೆಚ್ಚಿದೆ. ಸೋಂಕು ತಗುಲಿದಾಗ ವಿಳಂಬ ಮಾಡಿದರೆ ಕೊರೊನಾ ಸೋಂಕಿತರ ಪ್ರಾಣಕ್ಕೆ ಕುತ್ತು ಉಂಟಾಗಲಿದೆ. ಕೊನೆ ಕ್ಷಣದಲ್ಲಿ ಬಂದು ಆಸ್ಪತ್ರೆಗೆ ಸೇರಿದರೆ ವೈದ್ಯರಿಗೂ ಕಷ್ಟವಾಗುತ್ತದೆ.
ಬೆಂಗಳೂರಿನಲ್ಲಿ ವಿಳಂಬವಾಗಿ ಆಸ್ಪತ್ರೆಗೆ ದಾಖಲಾದ 14 ದಿನಗಳೊಳಗೆ 2504 ಜನ ಮೃತಪಟ್ಟಿದ್ದಾರೆ. ಕೊರೊನಾ ಸೋಂಕು ಉಲ್ಬಣವಾದಾಗ ಆಸ್ಪತ್ರೆಗೆ ದಾಖಲಾದರೆ ವೈದ್ಯರು ಕೂಡ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಕೊನೆ ಕ್ಷಣದಲ್ಲಿ ರೋಗಿಯನ್ನು ಬದುಕಿಸುವುದು ಕಷ್ಟವಾಗುತ್ತದೆ. ವೆಂಟಿಲೇಟರ್ ಗೆ ಹೋದ ಮೇಲೆ ರೋಗಿ ಬದುಕುವುದು ಕಷ್ಟವಾಗುತ್ತದೆ. ಹೀಗಾಗಿ ಸಣ್ಣ ಪ್ರಮಾಣದಲ್ಲಿ ಕಾಯಿಲೆ ಕಾಣಿಸಿಕೊಂಡ ಕೂಡಲೇ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆದುಕೊಳ್ಳಬೇಕಿದೆ ಎನ್ನಲಾಗಿದೆ.
ಕೊರೊನಾ ಮಿತಿ ಮೀರಿದಾಗ ರೋಗಿಯನ್ನು ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ. ಸೂಕ್ತವಾದ ಚಿಕಿತ್ಸೆ ಕೊಡಲು ಕಷ್ಟವಾಗಿ ರೋಗಿ ಜೀವಕ್ಕೆ ಅಪಾಯವಾಗುತ್ತದೆ. ಜನ ಕೊರೊನಾ ಬಗ್ಗೆ ನಿರ್ಲಕ್ಷ್ಯ ತೋರದೇ. ಪ್ರಾಣಕ್ಕೆ ಕುತ್ತು ತರುವ ಮೊದಲೇ ಚಿಕಿತ್ಸೆ ಪಡೆಯಬೇಕಿದೆ ಎನ್ನಲಾಗಿದೆ.