
ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದು ದಿನ ಬರೋಬ್ಬರಿ 445 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 11005 ಕ್ಕೆ ಏರಿಕೆಯಾಗಿದೆ.
ಇವತ್ತು ಒಂದೇ ದಿನ 246 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಇದುವರೆಗೆ 6916 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
3905 ಸಕ್ರಿಯ ಪ್ರಕರಣಗಳು ಇದ್ದು 178 ಮಂದಿ ಐಸಿಯುನಲ್ಲಿ ಇದ್ದಾರೆ. ಇವತ್ತು ಪತ್ತೆಯಾದ ಪ್ರಕರಣದಲ್ಲಿ 65 ಅಂತರಾಜ್ಯ ಪ್ರಯಾಣಿಕರಿದ್ದು, 21 ಮಂದಿ ಅಂತರಾಷ್ಟ್ರೀಯ ಪ್ರಯಾಣಿಕರಾಗಿದ್ದಾರೆ. ರಾಜ್ಯದಲ್ಲಿ ಇವತ್ತು ಒಂದೇ ದಿನ 10 ಮಂದಿ ಸಾವನ್ನಪ್ಪಿದ್ದು, ರಾಜ್ಯದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 180 ಕ್ಕೆ ಏರಿಕೆಯಾಗಿದೆ.
