ಬೆಂಗಳೂರು: ರಾಜ್ಯದಲ್ಲಿ ನಿನ್ನೆ ಒಂದೇ ದಿನ ದಾಖಲೆಯ 7178 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಒಟ್ಟು ಸೋಂಕಿತರ ಸಂಖ್ಯೆ 1,72,102 ಕ್ಕೆ ಏರಿಕೆಯಾಗಿದೆ. ನಿನ್ನೆ 5006 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದುವರೆಗೆ 89,238 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ನಿನ್ನೆ ಒಂದೇ ದಿನ 93 ಮಂದಿ ಮೃತಪಟ್ಟಿದ್ದು ಇದುವರೆಗೆ ಮೃತಪಟ್ಟವರ ಸಂಖ್ಯೆ 3091 ಕ್ಕೆ ಏರಿಕೆಯಾಗಿದೆ. 79,765 ಸಕ್ರಿಯ ಪ್ರಕರಣಗಳಿದ್ದು, 683 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರು 2665, ಬಳ್ಳಾರಿ 607, ಉಡುಪಿ 313, ಬೆಳಗಾವಿ 302, ರಾಯಚೂರು 295, ಕಲ್ಬುರ್ಗಿ, ಧಾರವಾಡ ತಲಾ 261, ಯಾದಗಿರಿ 200, ದಕ್ಷಿಣಕನ್ನಡ 194, ತುಮಕೂರು 177, ಕೊಪ್ಪಳ 163 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ.
ಬಾಗಲಕೋಟೆ 149, ವಿಜಯಪುರ 143, ಮೈಸೂರು 138, ಹಾಸನ 133, ದಾವಣಗೆರೆ 132, ಉತ್ತರಕನ್ನಡ 117, ಮಂಡ್ಯ 101, ಹಾವೇರಿ 95, ಗದಗ 94, ರಾಮನಗರ 93, ಚಿಕ್ಕಮಗಳೂರು 89, ಶಿವಮೊಗ್ಗ 73, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ತಲಾ 66, ಚಿತ್ರದುರ್ಗ 63, ಚಾಮರಾಜನಗರ 62, ಕೋಲಾರ 57, ಬೀದರ್ 47, ಕೊಡಗು ಜಿಲ್ಲೆಯಲ್ಲಿ 22 ಜನರಿಗೆ ಕೊರೋನಾ ಸೋಂಕು ತಗುಲಿದೆ.