
ಬೆಂಗಳೂರು: ರಾಜ್ಯದಲ್ಲಿ ಇವತ್ತು ದಾಖಲೆಯ 10,947 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 6,68,652 ಕ್ಕೆ ಏರಿಕೆಯಾಗಿದೆ.
5,42,906 ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದು, 1,16,153 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಇವತ್ತು 113 ಮಂದಿ ಮೃತಪಟ್ಟಿದ್ದು ಇದುವರೆಗೆ 9574 ಮಂದಿ ಸಾವನ್ನಪ್ಪಿದ್ದಾರೆ.
ಬೆಂಗಳೂರಿನಲ್ಲಿ ಇವತ್ತು ಒಂದೇ ದಿನ ಬರೋಬ್ಬರಿ 5 ಸಾವಿರ ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 2,62,241 ಕ್ಕೆ ಏರಿಕೆಯಾಗಿದ್ದು 2,00,426 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 58,624 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು ಇವತ್ತು ಒಂದೇ ದಿನ ಬೆಂಗಳೂರಿನಲ್ಲಿ 55 ಮಂದಿ ಸಾವನ್ನಪ್ಪಿದ್ದಾರೆ.