ಬೆಂಗಳೂರು: ರಾಜ್ಯದಲ್ಲಿ ಇಂದು 9860 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 3,61,341 ಕ್ಕೆ ಏರಿಕೆಯಾಗಿದೆ.
ಇವತ್ತು ಒಂದೇ ದಿನ 6287 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು ಇದುವರೆಗೆ 2,60,913 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಇಂದು 113 ಸೋಂಕಿತರು ಸಾವನ್ನಪ್ಪಿದ್ದು ಇದುವರೆಗೆ 5950 ಜನ ಮೃತಪಟ್ಟಿದ್ದಾರೆ. 94,459 ಸಕ್ರಿಯ ಪ್ರಕರಣಗಳಿದ್ದು 751 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರು ನಗರ:
ಬೆಂಗಳೂರು ನಗರದಲ್ಲಿ ಇವತ್ತು 3420 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,35,512 ಕ್ಕೆ ಏರಿಕೆಯಾಗಿದೆ. ಇವತ್ತು 2383 ಮಂದಿ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 93,563 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿರುತ್ತಾರೆ. 39,911 ಸಕ್ರಿಯ ಪ್ರಕರಣಗಳಿದ್ದು ಇವತ್ತು ಬೆಂಗಳೂರಿನಲ್ಲಿ 32 ಮಂದಿ ಮೃತಪಟ್ಟಿದ್ದಾರೆ. ಇದುವರೆಗೆ 2037 ಜನ ಸಾವನ್ನಪ್ಪಿದ್ದಾರೆ.
ಜಿಲ್ಲಾವಾರು ಮಾಹಿತಿ:
ಬಾಗಲಕೋಟೆ 166, ಬಳ್ಳಾರಿ 433, ಬೆಳಗಾವಿ 470, ಬೆಂಗಳೂರು ಗ್ರಾಮಾಂತರ 146, ಬೀದರ್ 62, ಚಾಮರಾಜನಗರ 67, ಚಿಕ್ಕಬಳ್ಳಾಪುರ 100, ಚಿಕ್ಕಮಗಳೂರು 117, ಚಿತ್ರದುರ್ಗ 174, ದಕ್ಷಿಣಕನ್ನಡ 414, ದಾವಣಗೆರೆ 321 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ.
ಧಾರವಾಡ 327, ಗದಗ 195, ಹಾಸನ 290, ಹಾವೇರಿ 149, ಕಲಬುರ್ಗಿ 194, ಕೊಡಗು 25, ಕೋಲಾರ 83, ಕೊಪ್ಪಳ 282, ಮಂಡ್ಯ 245, ಮೈಸೂರು 667, ರಾಯಚೂರು 232, ರಾಮನಗರ 59, ಶಿವಮೊಗ್ಗ 342, ತುಮಕೂರು 357, ಉಡುಪಿ 169, ಉತ್ತರಕನ್ನಡ 126, ವಿಜಯಪುರ 122, ಯಾದಗಿರಿ 106 ಜನರಿಗೆ ಸೋಂಕು ತಗುಲಿದೆ.
ಮರಣದ ವಿವರ:
ಇವತ್ತು ಬೆಂಗಳೂರಿನಲ್ಲಿ 32, ಬಳ್ಳಾರಿ 5, ಚಿಕ್ಕಮಗಳೂರು 4, ಚಿತ್ರದುರ್ಗ 3, ದಕ್ಷಿಣಕನ್ನಡ 6, ಧಾರವಾಡ 10, ಗದಗ 3, ಹಾಸನ 4, ಕಲಬುರ್ಗಿ 5, ಮೈಸೂರು 11, ರಾಯಚೂರು 3, ಶಿವಮೊಗ್ಗ 7, ತುಮಕೂರು 3, ಉಡುಪಿ 3, ವಿಜಯಪುರ ಜಿಲ್ಲೆಯಲ್ಲಿ ಮೂವರು ಸೇರಿದಂತೆ ರಾಜ್ಯದಲ್ಲಿ 113 ಮಂದಿ ಮೃತಪಟ್ಟಿದ್ದಾರೆ.