ಬೆಂಗಳೂರು: ಕೊರೋನಾ ಕುರಿತಂತೆ ಮತ್ತೊಂದು ಅಘಾತಕಾರಿ ಮಾಹಿತಿ ಅಧ್ಯಯನ ವರದಿಯಲ್ಲಿ ಬಹಿರಂಗವಾಗಿದೆ. ಟೆಸ್ಟಿಂಗ್ ತಡ ಮಾಡಿದರೆ ಹಠಾತ್ ಸಾವು ಸಂಭವಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
2697 ಮಂದಿ ಆಸ್ಪತ್ರೆಗೆ ಸೇರಿದ ಒಂದೇ ದಿನದಲ್ಲಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಮೃತಪಟ್ಟ 5 ಮಂದಿಯಲ್ಲಿ ಒಬ್ಬರು ಕೋವಿಡ್ ಪರೀಕ್ಷಾ ವರದಿ ಬಂದ ಒಂದೇ ದಿನದಲ್ಲಿ ಆಸ್ಪತ್ರೆ ಅಥವಾ ಮನೆಯಲ್ಲಿ ಮತಪಟ್ಟಿದ್ದಾರೆ.
ಆಗಸ್ಟ್ ನಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟವರ ಪೈಕಿ ಶೇಕಡ 17 ರಷ್ಟು ಮಂದಿ ಕೋವಿಡ್ ರಿಪೋರ್ಟ್ ಬಂದು 24 ಗಂಟೆಯೊಳಗೆ ಸಾವನ್ನಪ್ಪಿದ್ದಾರೆ. ಕೊರೋನಾ ಲಕ್ಷಣಗಳು ಕಾಣಿಸಿಕೊಂಡ ನಂತರವೂ ಕೋವಿಡ್ ಪರೀಕ್ಷೆ ತಡಮಾಡಿದರೆ ಹಠಾತ್ ಸಾವು ಸಂಭವಿಸುವ ಸಾಧ್ಯತೆ ಇದೆ. ಟೆಸ್ಟಿಂಗ್ ತಡವಾಗುವುದರಿಂದ ವೈರಸ್ ದೇಹದ ತುಂಬ ವ್ಯಾಪಿಸಿ ಸಾವಿಗೆ ಕಾರಣವಾಗುತ್ತದೆ ಎಂದು ಹೇಳಲಾಗಿದೆ.
ಫ್ರಾಕ್ಸಿಮಾ ಎಂಬ ಸಂಸ್ಥೆ ಜೀವನ್ ರಕ್ಷಾ ಯೋಜನೆಯಡಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಮತ್ತು ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾ ಸಹಯೋಗದಲ್ಲಿ ರಾಜ್ಯದಲ್ಲಿ ಆಗಸ್ಟ್ ತಿಂಗಳ ಕೊರೋನಾ ಅಂಕಿ ಅಂಶ ಅಧ್ಯಯನ ಕೈಗೊಂಡು ಮಹತ್ವದ ವರದಿ ಸಿದ್ಧಪಡಿಸಿದೆ. ವರದಿಯಲ್ಲಿ ಕಂಡುಕೊಂಡ ಮಾಹಿತಿಯಂತೆ ಕೊರೋನಾ ಟೆಸ್ಟಿಂಗ್ ತಡಮಾಡಿದರೆ ಹಠಾತ್ ಸಾವು ಸಂಭವಿಸುವ ಸಾಧ್ಯತೆ ಇದೆ ಎನ್ನಲಾಗಿದೆ.