ಬೆಂಗಳೂರು: ಬೆಂಗಳೂರಲ್ಲಿ ಕೊರೋನಾ ಸೋಂಕು ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು ಪುರುಷರಲ್ಲಿ ಅತಿಹೆಚ್ಚಾಗಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
20 ರಿಂದ 59 ವರ್ಷದ ಪುರುಷರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ತಗುಲಿದೆ. ಬಿಬಿಎಂಪಿ ಸಿದ್ದಪಡಿಸಿರುವ ವರದಿಯಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.
24 ಗಂಟೆಗಳ ಅವಧಿಯಲ್ಲಿ ದಾಖಲಾದ ಕೇಸುಗಳಲ್ಲಿ 20 ರಿಂದ 29 ವರ್ಷದ 278 ಪುರುಷರಿದ್ದಾರೆ. 30 – 39 ವರ್ಷದ 271 ಮಂದಿ, 40 – 49 ವರ್ಷದವರಲ್ಲಿ 233 ಜನ ಹಾಗೂ 50 – 59 ವರ್ಷದವರಲ್ಲಿ 183 ಜನ ಪುರುಷರಿಗೆ ಕೊರೋನಾ ಸೋಂಕು ತಗುಲಿರುವುದು ಗೊತ್ತಾಗಿದೆ. ವಿವಿಧ ವಯೋಮಾನದ ಪುರುಷರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ತಗುಲಿದೆ ಎನ್ನಲಾಗಿದೆ.