alex Certify ದಾಖಲೆಯ 8818 ಜನರಿಗೆ ಕೊರೋನಾ: 20 ಜಿಲ್ಲೆಗಳಿಗೆ ಬಿಗ್ ಶಾಕ್, ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು ಇಲ್ಲಿದೆ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಾಖಲೆಯ 8818 ಜನರಿಗೆ ಕೊರೋನಾ: 20 ಜಿಲ್ಲೆಗಳಿಗೆ ಬಿಗ್ ಶಾಕ್, ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು ಇಲ್ಲಿದೆ ವಿವರ

ಬೆಂಗಳೂರು: ರಾಜ್ಯದಲ್ಲಿ ನಿನ್ನೆ ದಾಖಲೆಯ 8818 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 2,19,976 ಕ್ಕೆ ಏರಿಕೆಯಾಗಿದೆ.

ನಿನ್ನೆ ಒಂದೇ ದಿನ 6629 ಮಂದಿ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 1,34,811 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ನಿನ್ನೆ 114 ಮಂದಿ ಮೃತಪಟ್ಟಿದ್ದು ಇದುವರೆಗೆ 3831 ಜನರು ಸಾವನ್ನಪ್ಪಿದ್ದಾರೆ. 81,276 ಸಕ್ರಿಯ ಪ್ರಕರಣಗಳಿದ್ದು, 716 ಜನ ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ 3495 ಜನರಿಗೆ ಕೊರೊನಾ ಸೋಂಕು ತಗಲಿದ್ದು 34858 ಸಕ್ರಿಯ ಪ್ರಕರಣಗಳಿವೆ. ಬಳ್ಳಾರಿಯಲ್ಲಿ 759, ಮೈಸೂರು 635, ಬೆಳಗಾವಿ 358, ದಾವಣಗೆರೆ 327, ದಕ್ಷಿಣಕನ್ನಡ 271, ಉಡುಪಿ 241, ಧಾರವಾಡ 239, ವಿಜಯಪುರ 232 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ.

ಕಲಬುರ್ಗಿ 189, ಕೊಪ್ಪಳ 178, ಬಾಗಲಕೋಟೆ 168, ತುಮಕೂರು 161, ರಾಯಚೂರು 155, ಹಾಸನ 154, ಬೆಂಗಳೂರು ಗ್ರಾಮಾಂತರ 152, ಗದಗ 142, ಶಿವಮೊಗ್ಗ 133, ಹಾವೇರಿ 116, ಬೀದರ್ 113, ಮಂಡ್ಯ 84, ಚಿಕ್ಕಮಗಳೂರು 79, ಉತ್ತರಕನ್ನಡ 75, ಯಾದಗಿರಿ, ಚಾಮರಾಜನಗರ ತಲಾ 64, ಕೋಲಾರ 55, ರಾಮನಗರ 53, ಕೊಡಗು 48, ಚಿಕ್ಕಬಳ್ಳಾಪುರ 44, ಚಿತ್ರದುರ್ಗ ಜಿಲ್ಲೆಯಲ್ಲಿ 34 ಜನರಿಗೆ ಕೊರೋನಾ ಸೋಂಕು ತಗುಲಿದೆ.

ನಿನ್ನೆ ಬೆಂಗಳೂರಲ್ಲಿ 35, ಬಳ್ಳಾರಿ 6, ಮೈಸೂರು 10, ಬಳ್ಳಾರಿ 5, ದಾವಣಗೆರೆ 5, ದಕ್ಷಿಣ ಕನ್ನಡ 6, ಧಾರವಾಡ 7 ಮಂದಿ ಸೇರಿದಂತೆ ರಾಜ್ಯದಲ್ಲಿ ನಿನ್ನೆ 114 ಜನ ಸೋಂಕಿತರು ಸಾವನ್ನಪ್ಪಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...