ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 204 ಮಂದಿಗೆ ಕೊರೋನಾ ಇದರೊಂದಿಗೆ ಸೋಂಕಿತರ ಸಂಖ್ಯೆ 6245 ಕ್ಕೆ ಏರಿಕೆಯಾಗಿದೆ.
ಯಾದಗಿರಿಯಲ್ಲಿ 66, ಉಡುಪಿ 22, ಬೆಂಗಳೂರು ನಗರ 17, ಕಲಬುರ್ಗಿ 16, ರಾಯಚೂರು 15, ಬೀದರ್ 14, ದಾವಣಗೆರೆ 9, ಶಿವಮೊಗ್ಗ 10, ರಾಮನಗರ 5, ಕೋಲಾರ 6, ಮೈಸೂರು 5, ವಿಜಯಪುರ 4, ಬಾಗಲಕೋಟೆ, ಉತ್ತರ ಕನ್ನಡ ತಲಾ 3, ದಕ್ಷಿಣ ಕನ್ನಡ, ಧಾರವಾಡ, ಹಾಸನ ತಲಾ 2, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಕೊಪ್ಪಳ ತಲಾ ಒಬ್ಬರಿಗೆ ಕೊರೊನಾ ಸೋಂಕು ತಗುಲಿದೆ.
ಇವತ್ತು 114 ಮಂದಿ ಬಿಡುಗಡೆಯಾಗಿದ್ದು, ಇದುವರೆಗೆ 2976 ಮಂದಿ ಬಿಡುಗಡೆಯಾಗಿದ್ದಾರೆ. 3195 ಸಕ್ರಿಯ ಪ್ರಕರಣಗಳಿದ್ದು 72 ಮಂದಿ ಮೃತಪಟ್ಟಿದ್ದಾರೆ.