ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್ ಸಿಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆಗಳಲ್ಲಿ ಬೆಡ್ ಸಿಗುತ್ತಿಲ್ಲ ಎಂದು ಕಣ್ಣೀರಿಡುತ್ತಾ ಕೊರೊನಾ ಸೋಂಕಿತರೊಬ್ಬರನ್ನು ಸಿಎಂ ಮನೆ ಮುಂದೆಯೇ ಕುಟುಂಬವೊಂದು ಆಂಬುಲೆನ್ಸ್ ನಲ್ಲಿ ಕರೆ ತಂದಿದ್ದ ಘಟನೆ ಬೆನ್ನಲ್ಲೇ ಇದೀಗ ಅಂತದ್ದೇ ಮತ್ತೊಂದು ಪ್ರಕರಣ ನಡೆದಿದೆ.
ಸುಮಾರು 15 ಆಸ್ಪತ್ರೆಗಳನ್ನು ಅಲೆದಾಡಿದರೂ ಎಲ್ಲಿಯೂ ಬೆಡ್ ವ್ಯವಸ್ಥೆ ಸಿಗುತ್ತಿಲ್ಲ ಎಂದು ಕುಟುಂಬವೊಂದು ಸಿಎಂ ನಿವಾಸದ ಬಳಿಯೇ ಸೋಂಕಿತನನ್ನು ಆಟೋದಲ್ಲಿ ಕರೆದುಕೊಂಡು ಬಂದಿರುವ ಘಟನೆ ನಡೆದಿದೆ.
ಮನೆ ಹೊತ್ತಿ ಉರಿಯುತ್ತಿದ್ದರೂ ತಲೆ ಕೆಡಿಸಿಕೊಳ್ಳದೆ ಕೂಲಾಗಿ ಕುಳಿತ ಮಹಿಳೆ…!
ಕೆ.ಜಿ. ಹಳ್ಳಿ ಮೂಲದ ವ್ಯಕ್ತಿಗೆ 5 ದಿನಗಳ ಹಿಂದೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ದಿನದಿಂದ ದಿನಕ್ಕೆ ಉಸಿರಾಟದ ತೊಂದರೆ ಹೆಚ್ಚುತ್ತಿದೆ. ಹಾಗಾಗಿ ಆಸ್ಪತ್ರೆಗೆ ದಾಖಲಿಸಬೇಕೆಂದು ಇಡೀ ಬೆಂಗಳೂರಿನ ಆಸ್ಪತ್ರೆಗಳಿಗೆ ಅಲೆದಾಡಿದ್ದಾರೆ. ಬೆಳಿಗ್ಗೆಯಿಂದ 15 ಆಸ್ಪತ್ರೆಗಳಿಗೆ ಅಲೆದಾಡಿದರೂ ಸಾಮಾನ್ಯ ಬೆಡ್ ಕೂಡ ಸಿಗುತ್ತಿಲ್ಲ. ಬೆಡ್ ವ್ಯವಸ್ಥೆ ಮಾಡಿಕೊಡುವಂತೆ ಸಿಎಂ ಮನೆ ಮುಂದೆ ಬಂದಿದ್ದಾರೆ.
ಆದರೆ ಸಿಎಂ ಮನೆ ಮುಂದೆ ಇದ್ದ ಪೊಲೀಸರು ಬಿಬಿಎಂಪಿ ವಾರ್ ರೂಂ ಗೆ ಹೋಗಿ ಎಂದು ಸೋಂಕಿತನ ಕುಟುಂಬವನ್ನು ಕಳುಹಿಸಿಕೊಟ್ಟಿದೆ. ಒಟ್ಟಾರೆ ರಾಜಧಾನಿಯ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ವೆಂಟಿಲೇಟರ್, ಆಕ್ಸಿಜನ್ ಬೆಡ್ ಅಲ್ಲ ನಾರ್ಮಲ್ ಬೆಡ್ ಕೂಡ ಸಿಗದ ದುಃಸ್ಥಿತಿ ಬಂದಿದೆ.