ಕಲಬುರಗಿ: ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಆಯುಷ್ ಇಲಾಖೆಯಿಂದ ಬಿಡುಗಡೆಯಾದ ಯುನಾನಿ ಪದ್ಧತಿಯ ಆಯುಷ್ ಜೋಷಂಧಾ(Joshanda) ಹಾಗೂ ಅರ್ಕ್-ಎ-ಅಜೀಬ್(Arq-e-Ajeeb) ಔಷಧಿಗಳನ್ನು ಸಾರ್ವಜನಿಕರು ಬಳಸಬಹುದಾಗಿದೆ ಎಂದು ಕಲಬುರಗಿ ಸರ್ಕಾರಿ ಯುನಾನಿ ಆಸ್ಪತ್ರೆಯ ಸ್ಥಾಯಿ ವೈದ್ಯಾಧಿಕಾರಿ ಡಾ.ಖುತೇಜಾ ಸುಲ್ತಾನಾ ತಿಳಿಸಿದ್ದಾರೆ.
ಕೊರೋನಾ ವೈರಸ್ (ಕೋವಿಡ್-19) ಪ್ರಯುಕ್ತ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸಾರ್ವಜನಿಕರಿಗೆ ಉಚಿತವಾಗಿ ಈ ಯುನಾನಿ ಔಷಧಿಗಳನ್ನು ವಿತರಿಸಲಾಗುತ್ತಿದ್ದು, ಸಾರ್ವಜನಿಕರು ಸರ್ಕಾರಿ ಯುನಾನಿ ಆಸ್ಪತ್ರೆ (50 ಹಾಸಿಗೆ), ದುಬೈ ಕಾಲೋನಿ, ಆಳಂದ ಚೆಕ್ಪೋಸ್ಟ್ ಹತ್ತಿರ, ಕಲಬುರಗಿ ಕಚೇರಿಗೆ ಸಂಪರ್ಕಿಸಿ ಔಷಧಿ ಪಡೆಯಬಹುದಾಗಿದೆ ಅವರು ತಿಳಿಸಿದ್ದಾರೆ.