ಕೊರೊನಾ ಸೋಂಕಿನ ಬಗ್ಗೆ ಆತಂಕ ಹೆಚ್ಚಾಗಿರುವ ಈ ಹೊತ್ತಲ್ಲಿ ತಮ್ಮದೇ ಸರಳ ಭಾಷೆಯ ಮೂಲಕ ಜನಸಾಮಾನ್ಯರಿಗೆ ಮಾಹಿತಿ ನೀಡುತ್ತಿರುವ ಡಾ. ರಾಜು ಅವರ ಮತ್ತೊಂದು ವಿಡಿಯೋ ಬಿಡುಗಡೆಯಾಗಿದೆ.
ಜನಸಾಮಾನ್ಯರ ಪ್ರಶ್ನೆಗಳಿಗೆ ರಾಜು ವಿಡಿಯೋದಲ್ಲಿ ಉತ್ತರ ನೀಡಿದ್ದು, ಕೊರೊನಾ ಚಿಕಿತ್ಸೆಗೆ ಬೆಡ್ರೆಸ್ಟ್ ತೆಗೆದುಕೊಳ್ಳುವುದು ಮುಖ್ಯವಾಗಿದೆ. ಆರೋಗ್ಯಕರವಾದ ಊಟ, ನೀರನ್ನು ಸೇವಿಸಬೇಕು. ಲಕ್ಷಣವಿರುವ ತನಕ ವಿಶ್ರಾಂತಿ ಪಡೆಯುವುದು ಒಳ್ಳೆಯದು ಎಂದು ಹೇಳಿದ್ದಾರೆ.
ಕಚೇರಿಗಳಲ್ಲಿ ಬಲವಂತವಾಗಿ ಕೊರೊನಾ ಪರೀಕ್ಷೆಗೆ ಒತ್ತಡ ಹಾಕಲಾಗುತ್ತಿದೆ ಎಂಬ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಿ, ಇದೊಂದು ಸ್ಕ್ಯಾಮ್ ಆಗಿದೆ. ಕಚೇರಿ, ಕಂಪನಿಗಳಿಗೆ ತೆರಳಿ ಕೆಲವರು ಕೊರೊನಾ ಪರೀಕ್ಷೆ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ವೇತನ ಕೊಡುವುದಿಲ್ಲ ಎಂದು ಬಲವಂತ ಮಾಡುತ್ತಿದ್ದು ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ತಿಳಿಸಿದ್ದಾರೆ.
ಲಕ್ಷಣವಿಲ್ಲದ ಆರೋಗ್ಯವಂತ ಜನರಿಗೆ ಬಲವಂತವಾಗಿ ಟೆಸ್ಟ್ ಮಾಡಿಸಿಕೊಳ್ಳಲು ಒತ್ತಾಯಿಸುವುದು ಸರಿಯಲ್ಲ. ಡಯಾಬಿಟಿಸ್, ಕ್ಯಾನ್ಸರ್ ಮೊದಲಾದ ರೋಗಿಗಳು ಮುನ್ನೆಚ್ಚರಿಕೆ ವಹಿಸುವುದು ಒಳ್ಳೆಯದು. ಶುಗರ್ ಲೆವೆಲ್ ಮೆಂಟೇನ್ ಮಾಡಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬುದು ಸೇರಿದಂತೆ ಹಲವು ಸಲಹೆಗಳನ್ನು ಅವರು ನೀಡಿದ್ದಾರೆ. ಈ ವಿಡಿಯೋ ನೀವೂ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.