
ಕಲ್ಬುರ್ಗಿಯಲ್ಲಿ ಇವತ್ತು ಒಂದೇ ದಿನ 39 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 660 ಏರಿಕೆಯಾಗಿದೆ.
ಯಾದಗಿರಿಯಲ್ಲಿ 39 ಜನರಿಗೆ ಸೋಂಕು ತಗಲಿದ್ದು ಒಟ್ಟು ಸೋಂಕಿತರ ಸಂಖ್ಯೆ 515ಕ್ಕೆ ಏರಿಕೆಯಾಗಿದೆ. ಬೆಳಗಾವಿಯಲ್ಲಿ 38, ಬೆಂಗಳೂರು ನಗರದಲ್ಲಿ 23, ದಕ್ಷಿಣಕನ್ನಡ 17, ದಾವಣಗೆರೆ 17, ಉಡುಪಿ 13, ಶಿವಮೊಗ್ಗ 12, ವಿಜಯಪುರ 9, ಬೀದರ್ 7, ಬಳ್ಳಾರಿ 6, ಬೆಂಗಳೂರು ಗ್ರಾಮಾಂತರ 5, ಹಾಸನ 5, ಧಾರವಾಡ 3, ಗದಗ 2, ಉತ್ತರ ಕನ್ನಡ 2, ಮಂಡ್ಯ, ರಾಯಚೂರು ತಲಾ ಒಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 239 ಮಂದಿಗೆ ಕೊರೋನಾ ಪಾಸಿಟಿವ್ ಇರುವುದು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 5452 ಕ್ಕೆ ಏರಿಕೆಯಾಗಿದೆ.