
ಬೆಂಗಳೂರು: ರಾಜ್ಯದಲ್ಲಿ ಇವತ್ತು ಕೊರೋನಾ ಸೋಂಕಿನಿಂದ ನಾಲ್ವರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಕೊರೋನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 57 ಕ್ಕೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ 65 ವರ್ಷದ ವೃದ್ಧೆ ಮತ್ತು 60 ವರ್ಷದ ವೃದ್ಧೆ ಮೃತಪಟ್ಟಿದ್ದಾರೆ. ದಾವಣಗೆರೆ ಮತ್ತು ಗದಗದಲ್ಲಿ ತಲಾ ಒಬ್ಬರು ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಉಡುಪಿಯಲ್ಲಿ ಇವತ್ತು ಒಂದೇ ದಿನ 92 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಇದರೊಂದಿಗೆ ಉಡುಪಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 564 ಕ್ಕೆ ಏರಿಕೆಯಾಗಿದೆ. ರಾಯಚೂರು ಜಿಲ್ಲೆಯಲ್ಲಿ 88, ಬೆಂಗಳೂರು ನಗರ 9, ಮಂಡ್ಯ 15, ಬೆಳಗಾವಿ 12, ಹಾಸನ 15, ದಾವಣಗೆರೆ 13, ಚಿಕ್ಕಬಳ್ಳಾಪುರ 2, ದಕ್ಷಿಣಕನ್ನಡ 4, ವಿಜಯಪುರ, ಮೈಸೂರು, ಬಳ್ಳಾರಿ, ಹಾವೇರಿಯಲ್ಲಿ ತಲಾ ಒಬ್ಬರು ಸೇರಿದಂತೆ ಒಟ್ಟು 257 ಪ್ರಕರಣ ದಾಖಲಾಗಿದೆ.